ಉಡುಪಿ : ತನ್ನ ವಾರ್ಡಿನ ಜನರಿಗೆ ಆರೋಗ್ಯ ಇಲಾಖೆಯ ಸವಲತ್ತುಗಳ ಸರಿಯಾದ ಮಾಹಿತಿ ನೀಡಿಲ್ಲ ಎಂದು ಆರೋಪಿಸಿ ಉಡುಪಿ ನಗರಸಭಾ ಸದಸ್ಯ ಯೋಗೀಶ್ ವಡಬಾಂದೇಶ್ವರ ಅವರು ಉಡುಪಿ ಆರೋಗ್ಯಾಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದಾರೆ.
ಜುಲೈ 16 ರ ಮಂಗಳವಾರ ವಡಬಾಂದೇಶ್ವರ ವಾರ್ಡ್ ನ ನೂತನ ಸದಸ್ಯ ಯೋಗೀಶ್ ಸಾಲಿಯಾನ್ ಅವರು ತನ್ನ ವಾರ್ಡ್ ನ ಸಮಸ್ಯೆಯೊಂದನ್ನು ಸರಿಪಡಿಸಿಲ್ಲವೆಂದು ಉಡುಪಿ ಮುನ್ಸಿಪಾಲಿಟಿ ಆರೋಗ್ಯ ಇನ್ಸ್‌ಪೆಕ್ಟರ್ ಪ್ರಸನ್ನ ಅವರಿದ್ದ ಕಚೇರಿಗೆ ನುಗ್ಗಿ ವಾಗ್ವಾದ ನಡೆಸಿ ಮಾತಿಗೆ ಮಾತು ಬೆಳೆದು ಯೋಗೀಶ್ ಅವರು ಪ್ರಸನ್ನ ಅವರಿಗೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಹಲ್ಲೆಯಿಂದ ಗಾಯಗೊಂಡ ಆರೋಗ್ಯಾಧಿಕಾರಿ ಪ್ರಸನ್ನ ಅವರನ್ನು ಉಡುಪಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
Click this button or press Ctrl+G to toggle between Kannada and English