ಆಗಸ್ಟ್ 23, ಶ್ರೀ ಕ್ಷೇತ್ರ ಕದ್ರಿಯಲ್ಲಿ ರಾಷ್ಟ್ರೀಯ ಮಕ್ಕಳ ಉತ್ಸವ- ಶ್ರೀಕೃಷ್ಣ ವೇಷ ಸ್ಪರ್ಧೆ

2:52 PM, Saturday, July 20th, 2019
Share
1 Star2 Stars3 Stars4 Stars5 Stars
(No Ratings Yet)
Loading...

kalkura Krishna Vesha ಮಂಗಳೂರು : ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರಆಶ್ರಯದಲ್ಲಿಆಗಸ್ಟ್ 23ನೇ ಶುಕ್ರವಾರ ವರ್ಷಂಪ್ರತಿಯಂತೆ ಶ್ರೀಕ್ಷೇತ್ರ ಕದ್ರಿಯಲ್ಲಿರಾಷ್ಟ್ರೀಯ ಮ್ಕಕಳ ಉತ್ಸವ ಶ್ರೀಕೃಷ್ಣ ವೇಷ ಸ್ಪರ್ಧೆಯುಜರಗಲಿದೆ. ಬೆಳಿಗ್ಗೆ 9ರಿಂದ ಆರಂಭಗೊಂಡು ರಾತ್ರಿ 9ರವರೆಗೆ ನಡೆಯಲಿರುವ ಈ ಬೃಹತ್ ಸ್ಪರ್ಧಾಕಾರ್ಯಕ್ರಮದಲ್ಲಿ ಈ ಬಾರಿಒಟ್ಟು30 ವಿಭಾಗಗಳಿದ್ದು ಎಲ್ಲವೂ ಏಕಕಾಲದಲ್ಲಿ ನಡೆಯಲಿವೆ.

ಒಂದು ವರ್ಷದೊಳಗಿನ ಕಂದಮ್ಮಗಳಿಂದ ತೊಡಗಿ 7ನೇ ತರಗತಿವರೆಗಿನ ಮಕ್ಕಳಿಗೆ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಪಾರಂಪರಿಕ/ ಆಧುನಿಕ ಗೀತೆಗಳ ಪ್ರಸ್ತುತಿ ’ಗಾನವೈಭವ’ ಸ್ಪರ್ಧೆಯು ಮಕ್ಕಳಿಗಾಗಿ ಈ ಬಾರಿ 4ವಿಭಾಗಗಳಲ್ಲಿ ಏರ್ಪಡಿಸಲಾಗಿದೆ. ಕಂದಕೃಷ್ಣ, ಮುದ್ದುಕೃಷ್ಣ, ತುಂಟಕೃಷ್ಣ, ಬಾಲಕೃಷ್ಣ, ಕಿಶೋರಕೃಷ್ಣ, ಶ್ರೀಕೃಷ್ಣ, ಗೀತಾಕೃಷ್ಣ, ರಾಧಾಕೃಷ್ಣ, ದೇವಕಿಕೃಷ್ಣ, ಯಶೋದಕೃಷ್ಣ, ವಸುದೇವಕೃಷ್ಣ, ಯಕ್ಷಕೃಷ್ಣ, ಶಂಖನಾದ, ಶಂಖಉದ್ಘೋಷ, ನಂದಗೋಕುಲ, ಬಾಲಕೃಷ್ಣ ರಸಪ್ರಶ್ನೆ, ಶ್ರೀಕೃಷ್ಣ ರಸಪ್ರಶ್ನೆ, ಛಾಯಾಕೃಷ್ಣ, ವರ್ಣವೈಭವ, ಹಾಗೂ ಈ ಬಾರಿಯ ವಿಶೇಷ ಶ್ರೀ ಕೃಷ್ಣ ಕಥಾಚಿತ್ರ ಸ್ಪರ್ಧೆ ಮೊದಲಾದ ವೈವಿಧ್ಯಮಯ ಸ್ಪರ್ಧೆಗಳು ವಿವಿಧ ವಿಭಾಗಗಳಲ್ಲಿ ನಡೆಯಲಿರುವುದು.

ಹೆಚ್ಚಿನ ಮಾಹಿತಿಗಾಗಿದಯಾನಂದಕಟೀಲು (9448545578) ನವನೀತ್ ಶೆಟ್ಟಿಕದ್ರಿ (9448123061) ಶ್ರೀ ಜಾನ್‌ಚಂದ್ರನ್ (9844284175)ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸುವಂತೆ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪಕುಮಾರಕ ಲ್ಕೂರ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English