ಬೀಚ್ ಗಳಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೂವರ ಬಂಧನ

3:26 PM, Saturday, July 20th, 2019
Share
1 Star2 Stars3 Stars4 Stars5 Stars
(No Ratings Yet)
Loading...

MDMAಮಂಗಳೂರು : ಬೀಚ್ ಗಳಲ್ಲಿ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಪಣಂಬೂರು ಪೊಲೀಸರು ಕಾರ್ಯಾಚರಣೆ ನಡೆಸಿ ಶುಕ್ರವಾರ ಮೂವರನ್ನು ಬಂಧಿಸಿದ್ದು ಲಕ್ಷಾಂತರ ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.

ಉಳ್ಳಾಲ ಒಳಪೇಟೆಯ ಅಬೂಬಕ್ಕರ್‌ ಮಿಸ್ಭಾ (24), ಸೋಮೇಶ್ವರದ ಪೆರ್ಮನ್ನೂರು ಗ್ರಾಮ ಶಬ್ಬೀರ್‌ ಅಹಮ್ಮದ್‌(27) , ಉಳ್ಳಾಲದ ಶಿಹಾಬ್‌ ಅಬ್ದುಲ್‌ ರಝಾಕ್ (27)  ಬಂಧಿತ ಆರೋಪಿಗಳು.

ಬಂಧಿತರಿಂದ 80 ಮೌಲ್ಯದ 16.45 ಗ್ರಾಂ ತೂಕದ ಎಂಡಿಎಂಎ, 25000 ರೂ ಮೌಲ್ಯದ ಸ್ಕೂಟರ್, 2 ಸಾವಿರ ಮೌಲ್ಯದ 4 ಮೊಬೈಲ್ , 3200 ರೂ ನಗದು ವಶಪಡಿಸಿಕೊಂಡಿದ್ದಾರೆ. ಸ್ವಾಧೀನಪಡಿಸಿಕೊಂಡ ಒಟ್ಟು ಮೌಲ್ಯ 1,28,200 ರೂ.ಎಂದು ಅಂದಾಜಿಸಲಾಗಿದೆ.

ಈ ಮೂವರು ಆರೋಪಿಗಳು ಮುಂಬಯಿಗೆ ತೆರಳಿ ಅಲ್ಲಿಂದ ಎಂಡಿಎಂಎ ಖರೀದಿ ಮಾಡುತ್ತಿದ್ದರು. ಬಳಿಕ ಕಾಲೇಜು ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ, ಮಂಗಳೂರು ನಗರ, ಉಳ್ಳಾಲ, ಪಣಂಬೂರು, ಹಾಗೂ ಇತರ ಬೀಚ್ ಗಳಲ್ಲಿ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ವಿಶೇಷ ಅಪರಾಧ ಪತ್ತೆದಳ ಸಿಕ್ಕ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಪರಾರಿಯಾಗಲು ಯತ್ನಿಸಿದರೂ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English