ಮಂಗಳೂರು : ಅಕ್ರಮವಾಗಿ ಭಾರಿ ಪ್ರಮಾಣದಲ್ಲಿ ಚಿನ್ನವನ್ನು ಗುದನಾಳದಲ್ಲಿ ಅಡಗಿಸಿಟ್ಟು ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಸೀಮಾ ಸುಂಕ ಅಧಿಕಾರಿಗಳು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಜುಲೈ 24 ರಂದು ದುಬೈನಿಂದ ಆಗಮಿಸಿದ ವಿಮಾನದಲ್ಲಿದ್ದ ಪ್ರಯಾಣಿಕ ತನ್ನ ಗುದನಾಳದಲ್ಲಿ ಚಿನ್ನ ಅಡಗಿಸಿಟ್ಟು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ. ವ್ಯಕ್ತಿಯನ್ನು ಪರಿಶೀಲಿಸುತ್ತಿದ್ದಾಗ 24 ಕ್ಯಾರೆಟ್ ಶುದ್ದತೆಯ 963 ಗ್ರಾಂ ಚಿನ್ನ ಪೇಸ್ಟ್ ರೂಪದಲ್ಲಿ ಸಿಕ್ಕಿದೆ. ಸುಮಾರು 34.18 ಲಕ್ಷ ರೂ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡ ಕಸ್ಟಮ್ಸ್ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ.
Click this button or press Ctrl+G to toggle between Kannada and English