ಪ್ರತಿಜ್ಞಾ ವಿಧಿ ಬೋಧನೆ ರಾಜ್ಯಪಾಲರ ಕ್ರಮ ಸರಿ ಇಲ್ಲ – ಐವನ್ ಡಿಸೋಜ

11:11 PM, Saturday, July 27th, 2019
Share
1 Star2 Stars3 Stars4 Stars5 Stars
(No Ratings Yet)
Loading...

ivan ಮಂಗಳೂರು: ರಾಜ್ಯಪಾಲರು ಬಿ.ಎಸ್ ಯಡಿಯೂರಪ್ಪರವರಿಗೆ ಒಂದು ವಾರದಲ್ಲಿ ಬಹುಮತ ಸಾಬೀತು ಪಡಿಸಲು ಅನುಮತಿ ನೀಡಿ ಶುಕ್ರವಾರ ಪ್ರತಿಜ್ಞಾ ವಿಧಿ ಬೋಧಿಸಿದನ್ನು ಐವನ್ ಡಿಸೋಜ  ಪ್ರಶ್ನಿಸಿದ್ದಾರೆ

ಸಂಖ್ಯಾ ಬಲ ಇಲ್ಲದ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ನೀಡಿರುವ ರಾಜ್ಯಪಾಲರ ಕ್ರಮ ಸರಿ ಇಲ್ಲ. ಈ ಬಗ್ಗೆ ಯಾರಾದರೂ ನ್ಯಾಯಾಲಯದ ಮೊರೆ ಹೋದರೆ ಸರ್ಕಾರ ವಜಾಗೊಳ್ಳಲಿದೆ ಎಂದು  ಐವನ್ ಡಿಸೋಜ ಹೇಳಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಐವನ್ ಡಿಸೋಜ, ರಾಜ್ಯಪಾಲರು ಶೀಘ್ರವಾಗಿ ಪ್ರಮಾಣವಚನ ಬೋಧಿಸಿದ್ದಾರೆ. ಅವರಿಗೆ ಸಂಖ್ಯಾಬಲ ಇಲ್ಲದೆ ಪ್ರಮಾಣ ವಚನ ಬೋಧಿಸಿದ್ದಾರೆ. ಈ ಬಗ್ಗೆ ಯಾರಾದರೂ ನ್ಯಾಯಾಲಯದ ಮೊರೆ ಹೋದರೆ ಸರ್ಕಾರ ವಜಾ ಆಗಬಹುದು ಎಂದಿದ್ದಾರೆ.

ಹಾಗೆಯೇ ಈ ವಿಷಯದ ಬಗ್ಗೆ ಪಕ್ಷದ ಅಧ್ಯಕ್ಷರಲ್ಲಿ ಚರ್ಚಿಸಿರುವುದಾಗಿ ಅವರು ತಿಳಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English