ಮಂಗಳೂರು : “ನಾಗಾ ಸಾಧುಗಳಿಗೆ ಸಂಬಂಧಪಟ್ಟ ವಿಕೃತ ದೃಶ್ಯವನ್ನು ತೋರಿಸಲಾಗುವ ‘ ಲಾಲ್ ಕಪ್ತಾನ್’ ಚಲನಚಿತ್ರವನ್ನು ನಿಷೇದಿಸಲು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ.
ಹಿಂದು ಸಂಸ್ಕೃತಿಯಲ್ಲಿ ನಾಗಾ ಸಾಧುಗಳ ಸ್ಥಾನ ವಿಶೇಷ ಮಹತ್ವವಿದೆ. ಹಿಂದೂ ಧರ್ಮಕ್ಕಾಗಿ ಪ್ರಾಣವನ್ನು ಪಣಕ್ಕಿಡುವ ನಾಗಾ ಸಾಧುಗಳನ್ನು ಈ ಚಲನಚಿತ್ರದ ಮೂಲಕ ಅವಮಾನಿಸುವ ಪ್ರಯತ್ನ ಆಗಿದೆ .ಈ ಚಲನಚಿತ್ರವನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದೆ .
ಈ ಸಂದರ್ಭದಲ್ಲಿ ಗೋರಕ್ಷಕರ ಮೇಲೆ ಮಾರಣಾಂತಿಕ ಹಲ್ಲೆಯನ್ನು ಮಾಡುವ ಮತಾಂಧರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು.ಗೋ ರಕ್ಷಕರಾದ ಶ್ರೀ.ಚೇತನ್ ಶರ್ಮಾ, (ಬದಲಾಪುರ ಠಾಣೆ, ಮಹಾರಾಷ್ಟ್ರ), ಶ್ರೀ.ವಿಕಾಸ ಗೋಮಸಾಳ ಹಾಗೂ ಶ್ರೀ ಮಯೂರ ವಿಭಾಂಡು (ಧುಳೆ, ಮಹಾರಾಷ್ಟ್ರ) ದ ಮೇಲೆ ಮತಾಂಧ ಕಟುಕರು ಮಾರಣಾಂತಿಕ ಹಲ್ಲೆ ಮಾಡಿದರು.ಗೋ ಮಾತೆಯ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಕಾರ್ಯ ಮಾಡುವ ಗೋರಕ್ಷಕರಿಗೆ ಇಂದು ದೇಶದಲ್ಲಿ ಯಾವ ರಕ್ಷಣೆ ಇಲ್ಲದೇ ಆಗಿದೆ” ಎಂದು ವಿಚಾರ ಮಂಡಿಸಿದರು.
ಶ್ರೀ.ಉಪೇಂದ್ರ ಆಚಾರ್ಯ ಇವರು ಮಾತನಾಡುತ್ತಾ “ಮಹಾರಾಷ್ಟ್ರದ ಡಾ.ನರೇಂದ್ರ ದಾಭೋಲ್ಕರ,ಕಾ.ಪಾನಸರೆಯವರ ಹತ್ಯೆಯ ಬಗೆಗಿನ ತನಿಖೆಯ ಬಗ್ಗೆ ನ್ಯಾಯಾಲಯದಲ್ಲಿ ವಾದವನ್ನು ಮಂಡಿಸಿದ ನ್ಯಾಯವಾದಿ ಶ್ರೀ.ಸಂಜೀವ ಪುನಾಳೇಕರ್ ಇವರು ತನಿಖಾ ದಳದ ನಿಷ್ಕ್ರಿಯತೆಯನ್ನು ಜನರ ಮುಂದೆ ಬಯಲಿಗೆಳೆದಿದ್ದಾರೆ.ಆದ್ದರಿಂದ ಇದಕ್ಕೆ ಪ್ರತಿಕಾರವೆಂಬಂತೆ ನ್ಯಾಯವಾದಿ ಶ್ರೀ.ಸಂಜೀವ ಪುನಾಳೇಕರ ಹಾಗೂ ಮಾಹಿತಿ ಹಕ್ಕು ಅಧಿಕಾರದ ಕಾರ್ಯಕರ್ತರಾದ ಶ್ರೀ.ವಿಕ್ರಮ ಭಾವೆಯವರನ್ನು ಸಿ.ಬಿ.ಐಯ ಅನಧಿಕೃತವಾಗಿ ಬಂಧಿಸಿತ್ತು.ನ್ಯಾಯವಾದಿ ಶ್ರೀ.ಸಂಜೀವ ಪುನಾಳೇಕರ ಇಲ್ಲಿಯವರೆಗೆ ಸಮಾಜದ, ಹಿಂದುಳಿದ ವರ್ಗ,ಅಮಾಯಕ ಹಿಂದೂ ಕಾರ್ಯಕರ್ತ,ಪೀಡಿತ ಪೋಲೀಸರು, ಹಾಗೂ ಪತ್ರಕರ್ತರು, ಸಂತರು ಹಾಗೂ ಬಡವರಿಗೆ ಸ್ವತಃ ನೇತೃತ್ವ ವಹಿಸಿ ಕಾನೂನು ಮಾರ್ಗದಲ್ಲಿ ಸಹಾಯವನ್ನು ಮಾಡಿದ್ದಾರೆ. ಅವರ ಈ ಕಾರ್ಯವನ್ನು ನೋಡಿ ಅವರಲ್ಲಿ ಇಲ್ಲಸಲ್ಲದ ಆರೋಪವನ್ನು ಹೊರಿಸಿ ಅವರನ್ನು ಉದ್ದೇಶಪೂರ್ವಕವಾಗಿ ದಾಬೋಲ್ಕರ್ ಹತ್ಯೆಯಲ್ಲಿ ಸಿಲುಕಿಸುತ್ತಿರುವುದು ಸಂದೇಹಾಸ್ಪದವಾಗಿದೆ.ಹಿಂದುತ್ವನಿಷ್ಠರ ಈ ರೀತಿಯ ದಮನವನ್ನು ಹಿಂದೂ ಸಮಾಜವು ಎಂದೂ ಸಹಿಸುವುದಿಲ್ಲ. ಸಿ.ಬಿ.ಐ. ಶ್ರೀ ಸಂಜೀವಪುನಾಳೇಕರ್ ಇವರ ಮೇಲೆ ದಾಖಲಿಸಿದ ಆರೋಪವನ್ನು ಕೂಡಲೇ ತೆಗೆಯಬೇಕು ಎಂದು ಆಗ್ರಹಿಸಬೇಕು.” ಎಂದು ವಿಚಾರ ಮಂಡಿಸಿದರು.
ಈ ಸಂದರ್ಭದಲ್ಲಿ ಶ್ರೀ ರಾಮ ಸೇನೆಯ ಶ್ರೀ.ಜೀವನ್ ನೀರುಮಾರ್ಗ,ವಿಶ್ವಹಿಂದೂ ಪರಿಷತ್ತಿನ ಶ್ರೀ.ಮಧುಸೂದನ್ ಅಯ್ಯರ್, ಧರ್ಮಾಭಿಮಾನಿಗಳಾದ ಶ್ರೀ. ವಿವೇಕ್ ಅಂಚನ್, ಸುಶಾಂತ್ ಕುಳಾಯಿ ಮತ್ತು ಶ್ರೀ.ಸುರೇಶ್ ಕದ್ರಿ ಇವರು ಉಪಸ್ಥಿತಿತರಿದ್ದರು.
ಆಂದೋಲನ ವಿಷಯದ ಕುರಿತು ಸರ್ಕಾರವು ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಗೃಹಸಚಿವರಿಗೆ ಮನವಿಯನ್ನು ನೀಡಲಾಯಿತು.
ಆಂದೋಲನದ ಪ್ರಾರಂಭದಲ್ಲಿ ಶ್ರೀ. ಬಾಲಕೃಷ್ಣ ಶೆಟ್ಟಿ ಇವರು ಶಂಖನಾದ ಮಾಡಿದರು.ಸೌ.ಪ್ರಮೀಳಾ ರಮೇಶ್ ಇವರು ನಿರೂಪಿಸಿದರು.
Click this button or press Ctrl+G to toggle between Kannada and English