ಆಳ್ವಾಸ್‌ನಲ್ಲಿ ’ಆಟಿ ಕಷಾಯ” ವಿತರಣೆ

5:52 PM, Wednesday, July 31st, 2019
Share
1 Star2 Stars3 Stars4 Stars5 Stars
(No Ratings Yet)
Loading...

kashayaಮೂಡಬಿದಿರೆ: ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ದ್ರವ್ಯಗುಣ ವಿಜ್ಞಾನ ಸ್ನಾತಕೋತ್ತರ ವಿಭಾಗದ ವತಿಯಿಂದ ಪ್ರತಿ ವರ್ಷದಂತೆ ಆಟಿ ಅಮವಾಸ್ಯೆಯ ವಿಶೇಷವಾದ, ಸರ್ವರೋಗ ನಿರೋಧಕ ಪಾರಂಪರಿಕ ದಿವ್ಯೌಷಧ ”ಆಟಿ ಕಷಾಯ” ವಿತರಣಾ ಕಾರ‍್ಯಕ್ರಮವನ್ನು ದಿನಾಂಕ 01-08-2019ನೇ ಗುರುವಾರ ಬೆಳಿಗ್ಗೆ ಘಂಟೆ 08.30ರಿಂದ 11.00ರತನಕ ವಿದ್ಯಾಗಿರಿ ಆಳ್ವಾಸ್ ಆಯುರ್ವೇದ ಆಸ್ಪತ್ರೆಯ ಆವರಣದಲ್ಲಿ ಉಚಿತವಾಗಿ ವಿತರಿಸುವ ಕಾರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಪಕ ವೃಂದ ಹಾಗೂ ವಿದ್ಯಾರ್ಥಿ ವೃಂದ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English