ಮುಜರಾಯಿ ದೇವಾಲಯಗಳಲ್ಲಿ ಮಳೆಗಾಗಿ ವಿಶೇಷ ಪೂಜೆ ಜುಲೈ 27 ರಿಂದ

11:35 AM, Saturday, July 21st, 2012
Share
1 Star2 Stars3 Stars4 Stars5 Stars
(5 rating, 5 votes)
Loading...

Rainಬೆಂಗಳೂರು : ರಾಜ್ಯ ಸರ್ಕಾರ, ಮುಜರಾಯಿ ದೇವಾಲಯಗಳಲ್ಲಿ ‘ವರುಣಮಂತ್ರ ಪೂರ್ವಕವಾಗಿ ಜಲಾಭಿಷೇಕ ಪೂಜೆ’ ನಡೆಸಲು ಆದೇಶ ಹೊರಡಿಸಿದೆ. ತೀವ್ರ ಬರಗಾಲ ಆವರಿಸಿರುವುದರಿಂದ ಮಳೆಗಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಮುಜರಾಯಿ ಇಲಾಖೆಗೆ ವ್ಯಾಪ್ತಿಗೆ ಒಳಪಡುವ ಸುಮಾರು 34 ಸಾವಿರ ದೇವಾಲಯಗಳಲ್ಲಿ ಎರಡು ದಿನ ವಿಶೇಷ ಪೂಜೆ ನಡೆಯಲಿದೆ. ಪ್ರತಿ ದೇವಾಲಯದಲ್ಲಿ ತಲಾ ಐದು ಸಾವಿರ ರೂ. ವೆಚ್ಚದಲ್ಲಿ ಪೂಜೆ ಮಾಡಲು ಅವಕಾಶ ನೀಡಲಾಗಿದೆ.  ಈ ಜಲ ಪೂಜೆಗಾಗಿ ಒಟ್ಟು  17 ಕೋಟಿ ರೂ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ವೆಚ್ಚವನ್ನು ಆಯಾ ದೇವಾಲಯಗಳ ನಿಧಿಯಿಂದ ಭರಿಸಲು ಅನುಮತಿ ನೀಡಿದೆ. ದೇವಾಲಯಗಳಲ್ಲಿ ವಿಶೇಷ ಪೂಜೆಯು ಜುಲೈ 27 ರಂದು ಶುಕ್ರವಾರ ಹಾಗೂ ಆಗಸ್ಟ್‌ 2 ರಂದು ಗುರುವಾರ ನಡೆಯಲಿದೆ.

ಕೋಟ ಶ್ರೀನಿವಾಸ ಪೂಜಾರಿಯವರು ಮುಜರಾಯಿ ಸಚಿವರಾದ ಬಳಿಕ ಮೊದಲ ಬಾರಿಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯವು ಎದುರಿಸುತ್ತಿರುವ ಬರಗಾಲದ ಸಂಕಷ್ಟದಿಂದ ಪಾರಾಗಲು ದೇವಾಲಯಗಳಲ್ಲಿ ‘ವರುಣಮಂತ್ರ ಪೂರ್ವಕವಾಗಿ ಜಲಾಭಿಷೇಕ ಪೂಜೆ’ ಹಾಗೂ ಪರ್ಜನ್ಯ ಜಪ, ಹೋಗ ಹಾಗೂ ವಿಶೇಷ ಪೂಜೆ ನಡೆಸುವುದು ಅತ್ಯವಶ್ಯಕ ಎಂದು ಸರ್ಕಾರ ಮನಗಂಡಿದೆ ಎಂದು ಕಂದಾಯ ಇಲಾಖೆಯ ಮುಜರಾಯಿ ವಿಭಾಗ ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ.

ರಾಜ್ಯದಲ್ಲಿ ಸಕಾಲದಲ್ಲಿ ಮಳೆ-ಬೆಳೆ ಆಗದೇ ರಾಜ್ಯದ ಜನತೆ, ಜಾನುವಾರುಗಳು ಕಂಗಾಲಾಗಿ ರಾಜ್ಯವು ತೀವ್ರ ಬರಗಾಲ ಪರಿಸ್ಥಿತಿ ಎದುರಿಸಿರುವ ಸಂದರ್ಭದಲ್ಲಿ ರಾಜ್ಯದ ಜನತೆ ಹಾಗೂ ಜಾನುವಾರುಗಳ ಕ್ಷೇಮದ ಸಲುವಾಗಿ ರಾಜ್ಯದಲ್ಲಿ ಸುವೃಷ್ಟಿವುಂಟಾಗಿ ಬೆಳೆಗಳು ಸಮೃದ್ಧಿಯಾಗಿ ರಾಜ್ಯವು ಸುಭಿಕ್ಷವಾಗಲು ಧಾರ್ಮಿಕ ಮತ್ತು ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ನದಿ ತೀರ , ಕಲ್ಯಾಣಿ, ಪುಷ್ಕರಣಿಗಳನ್ನು ಹೊಂದಿರುವ ಕೊಲ್ಲೂರು ಮೂಕಾಂಬಿಕಾ, ಕುಕ್ಕೆ ಸುಬ್ರಹ್ಮಣ್ಯ, ಕಟೀಲು ದುರ್ಗಾ ಪರಮೇಶ್ವರಿ, ಶ್ರೀಕಂಠೇಶ್ವರಸೇರಿದಂತೆ ಪ್ರಮುಖ ದೇವಾಲಯಗಳಲ್ಲಿ ವರುಣ ದೇವರಿಗೆ ಪ್ರಾರ್ಥನೆ ಸಲ್ಲಿಸುವ ಸಲುವಾಗಿ ಪರ್ಜನ್ಯ ಜಪ, ಹೋಮ, ವಿಶೇಷ ಪೂಜೆ ಹಾಗೂ ಇತರೆ ಸಮೂಹ ಎ,  ದೇವಾಲಯಗಳಲ್ಲಿ ಜಲಾಭಿಷೇಕ ಪೂಜೆ ನಡೆಸಬೇಕು ಎಂದು ಸೂಚಿಸಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English