ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ದ್ರವ್ಯಗುಣ ವಿಜ್ಞಾನ ಸ್ನಾತಕೋತ್ತರ ವಿಭಾಗದ ವತಿಯಿಂದ ಗುರುವಾರ ಬೆಳಗ್ಗೆ ಸುಮಾರು 3,000 ಮಂದಿಗೆ ಉಚಿತ ಆಟಿ ಕಷಾಯ ವಿತರಿಸಲಾಯಿತು.
ಜೋತಿಷಿ ಪುತ್ತಿಗೆ ಸುಧಾಕರ ತಂತ್ರಿ ಸಾಂಕೇತಿಕವಾಗಿ ಔಷಧ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಆಗಮಿಸಿ ಸರ್ವರೋಗ ನಿವಾರಕ ಔಷಧೀಯ ಪಾನೀಯ ಸೇವಿಸಿದರು.
ಕಾರ್ಯಕ್ರಮದ ಸಂಯೋಜಕ ಹಾಗೂ ಆತ್ಮ (ಆಳ್ವಾಸ್ ಟ್ರೆಡಿಶನಲ್ ಮೆಡಿಸಿನ್ ಆರ್ಚೀವ್)ರಿಸರ್ಚ್ ಸೆಂಟರ್‌ನ ನಿರ್ದೇಶಕ ಡಾ| ಸುಬ್ರಮಣ್ಯ ಪದ್ಯಾಣ ಮಾತನಾಡಿ, ಹಾಲೆಮರದ ತೊಗಟೆಯಲ್ಲಿ ಅಮಾವಾಸ್ಯೆಯ ದಿನ ರೋಗ ನಿರೋಧಕ ಶಕ್ತಿ ಜಾಸ್ತಿ ಇರುವುದರಿಂದ ಈ ದಿನ ಮಾಡುವ ಕಷಾಯಕ್ಕೆ ಹೆಚ್ಚಿನ ಪ್ರಾಧಾನ್ಯ ಇದೆ. ಇದು ಸಾಂಕ್ರಾಮಿಕ ರೋಗಗಳಿಂದ ನಮ್ಮನ್ನು ಸಂರಕ್ಷಿಸಿಕೊಳ್ಳಲು ರಾಮಬಾಣ ಎಂದರು.
ಪ್ರಾಂಶುಪಾಲೆ ಡಾ| ಝೆನಿಕಾ ಡಿ’ಸೋಜಾ, ಉಪಪ್ರಾಂಶುಪಾಲ ಡಾ| ರವಿಕಾಂತ್, ಡಾ| ಸೌಮ್ಯಾ ಸರಸ್ವತಿ ಸಹಿತ ಬೋಧಕರು, ವಿದ್ಯಾರ್ಥಿಗಳು, ಸಿಬಂದಿಗಳು ಮೊದಲಾದವರು ಉಪಸ್ಥಿತರಿದ್ದರು
Click this button or press Ctrl+G to toggle between Kannada and English