ಅಡ್ಡಹೊಳೆ ಮನೆಯಲ್ಲಿ ಊಟ ಮಾಡಿದ ನಕ್ಸಲರ ತಂಡ, ಮುಂದುವರಿದ ಕೂಂಬಿಂಗ್ ಕಾರ‍್ಯಾಚರಣೆ

11:11 AM, Saturday, July 21st, 2012
Share
1 Star2 Stars3 Stars4 Stars5 Stars
(5 rating, 3 votes)
Loading...

naxalಪುತ್ತೂರು:  ಪುತ್ತೂರು ತಾಲೂಕಿನ ಶಿರಾಡಿ ಗ್ರಾಮದ ಅಡ್ಡಹೊಳೆ ಪ್ರದೇಶದಲ್ಲಿ ನಕ್ಸಲ್ ತಂಡ ಮತ್ತೆ ಕಾಣಿಸಿ ಕೊಂಡಿದೆ. ಬೆಳ್ತಂಗಡಿ ಶಿಶಿಲ ಪ್ರದೇಶದಲ್ಲಿ ನಕ್ಸಲರಿಗಾಗಿ ಎಎನ್‌ಎಫ್ ಹಾಗೂ ಪೊಲೀಸರು ಕೂಂಬಿಂಗ್ ಕಾರ್ಯಚರಣೆ ನಡೆಸುತ್ತಿದ್ದು ಈ ನಡುವೆ ಶಿರಾಡಿಯಲ್ಲಿ ನಕ್ಸಲ್ ತಂಡ ಪ್ರತ್ಯಕ್ಷ ವಾಗಿರುವುದು ತೀವ್ರ ಕುತೂಹಲ ಮೂಡಿಸಿದೆ.

ಅಡ್ಡಹೊಳೆಯ ವರ್ಗೀಸ್ ಎಂಬವರ ಮನೆಗೆ ಹಾಗೂ ಸಮೀಪದ ಇನ್ನೆರಡು ಮನೆಗಳಿಗೆ ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಗ್ಗಿನ ಜಾವ ಬಂದ ಐದು ಮಂದಿಯ ತಂಡ ಆ ಮನೆಯಲ್ಲಿ ಊಟ ನೀಡುವಂತೆ ಕೇಳಿಕೊಂಡಿದೆ, ಊಟ ಮುಗಿಸಿ ಬಳಿಕ ತಮ್ಮಲ್ಲಿದ್ದ ಲ್ಯಾಪ್‌ಟಾಪ್‌ಗೆ ರೀಚಾರ್ಜ್ ಮಾಡಿ ತೆರಳಿದ್ದಾರೆ.

ಬಳಿಕ  ಇದೇ ತಂಡ ಬೆಳಿಗ್ಗೆ ಪಕ್ಕದ ಮಿತ್ತ ಮಜಲು ಎಂಬಲ್ಲಿನ ಪ್ರಿನ್ಸ್ ಮತ್ತು ಜೋಸೆಫ್ ಎಂಬವರ ಮನೆಗೆ ಭೇಟಿ ನೀಡಿ ಚಾ ಕೇಳಿ ಕುಡಿದಿದ್ದು, ಬಳಿಕ ಅಕ್ಕಿ ನೀಡುವಂತೆ ಒತ್ತಾಯಿಸಿದೆ. ತಮ್ಮಲ್ಲಿ ಅಕ್ಕಿ ಎಂದಿದ್ದಕ್ಕೆ ಮರು ಮಾತಾಡದೆ ಅಲ್ಲಿಂದ ತೆರಳಿರುವುದಾಗಿ ಮನೆಯವರು ಹೇಳಿದ್ದಾರೆ.

ಓರ್ವ ಯುವತಿ ಹಾಗೂ ನಾಲ್ಕು ಮಂದಿ ಗಂಡಸರು ಇದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಕಳೆದ 8 ದಿನಗಳಿಂದ ನಕ್ಸಲರು ಈ ಭಾಗದಲ್ಲಿ ಅಲ್ಲಲ್ಲಿ ಕಂಡು ಬರುತ್ತಿದ್ದು, ಇಲ್ಲಿ  ನಕ್ಷಲರ ಚಟುವಟಿಕೆ ಜೀವಂತವಾಗಿರುವುದನ್ನು ಸಾಬೀತು ಮಾಡಿದೆ.  ಶಿಶಿಲ ಭಾಗದಲ್ಲಿ ಪೊಲೀಸರು ಹಾಗೂ ನಕ್ಸಲ್ ನಿಗ್ರಹ ದಳ ನಿರಂತರವಾಗಿ ಕೂಂಬಿಂಗ್ ನಡೆಸುತ್ತಿದ್ದರೂ ಇದೇ ಭಾಗದಲ್ಲಿ ಈ ತಂಡಗಳು ಪ್ರತ್ಯಕ್ಷವಾಗುತ್ತಿರುವ ಹಿನ್ನಲೆ ನಿಗೂಢವಾಗಿದೆ.

ನಕ್ಸಲ್ ಚಟುವಟಿಕೆ ಮತ್ತೆ ಪ್ರಾರಂಭಗೊಂಡ ಹಿನ್ನೆಲೆಯಲ್ಲಿ ಇದೀಗ ಮತ್ತೆ ಐಜಿಪಿ ಅಲೋಕ್ ಕುಮಾರ್, ಎಎಸ್ಪಿ ಅನುಚೇತ್ ನೇತೃತ್ವದಲ್ಲಿ ಕೂಂಬಿಂಗ್ ಕಾರ‍್ಯಾ ಚರಣೆಯನ್ನು ತೀವ್ರಗೊಳಿಸಿರುವುದಾಗಿ ತಿಳಿದು ಬಂದಿದೆ. ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿಯನ್ನು ಆಧರಿಸಿ ನಕ್ಸಲರ ರೇಖಾಚಿತ್ರಗಳನ್ನು ರಚಿಸಿ ನಕ್ಸಲರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ  ಎಂದು ತಿಳಿಸಿದೆ. ಈ ಬಾರಿ ಬಂದ ತಂಡ ಯಾವುದೇ ರೀತಿಯ ಕರಪತ್ರಗಳನ್ನು ಬಿಟ್ಟು ಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English