ಉಜಿರೆ: ಧೈರ್ಯ ಮತ್ತು ವಿಶ್ವಾಸವಿದ್ದಲ್ಲಿ ಯಶಸ್ವಿ ಉದ್ಯಮಿಗಳಾಗಬಹುದುಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಭಾನುವಾರ ಉಜಿರೆಯಲ್ಲಿ ಸ್ವ-ಉದ್ಯೋಗ ತರಬೇತಿ ಕೇಂದ್ರದಲ್ಲಿ ರುಡ್‌ಸೆಟ್ ಯಶಸ್ವೀ ಉದ್ಯಮಿಗಳ ಸಂಘ ಆಸರೆಆಶ್ರಯದಲ್ಲಿ ಆಯೋಜಿಸಿದ ಉದ್ಯಮಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕಜಗತ್ತಿನಲ್ಲಿ ವಿದ್ಯಾವಂತಯುವಜನತೆಗೆ ನೌಕರಿ ಸಿಗುವುದು ಕಷ್ಟ ಸಾಧ್ಯ.ಆದುದರಿಂದಕಠಿಣ ಪರಿಶ್ರಮದೊಂದಿಗೆ ಸ್ವ-ಉದ್ಯೋಗದ ಮೂಲಕ ಸ್ವಾವಲಂಬಿ ಜೀವನ ನಡೆಸಬಹುದು.ತನ್ಮೂಲಕಯುವಜನತೆ ಸಾಮಾಜಿಕ ಪರಿವರ್ತನೆಯ ರೂವಾರಿಗಳಾಗಬೇಕು ಎಂದುಅವರು ಸಲಹೆ ನೀಡಿದರು.
ಈ ದಿಸೆಯಲ್ಲಿರುಡ್‌ಸೆಟ್ ಸಂಸ್ಥೆ ನೀಡುತ್ತಿರುವತರಬೇತಿ ಮತ್ತು ಮಾರ್ಗದರ್ಶನ ಶ್ಲಾಘನೀಯವಾಗಿದೆಎಂದು ಹೇಳಿ ಅವರು ಅಭಿನಂದಿಸಿದರು.
ವಿಧಾನ ಪರಿಷತ್‌ಸದಸ್ಯ ಕೆ. ಹರೀಶ್‌ಕುಮಾರ್ ಮಾತನಾಡಿ, ಬದುಕಿನಲ್ಲಿಎದುರಾಗುವ ಸಮಸ್ಯೆಗಳನ್ನು, ಸವಾಲುಗಳನ್ನು ಧೃತಿಗೆಡದೆಧೈರ್ಯದಿಂದ ಎದುರಿಸಿದಾಗ ಮಾತ್ರಯಶಸ್ಸು ಪಡೆಯಲು ಸಾಧ್ಯವಾಗುತ್ತದೆ. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪ್ರಾರಂಭಿಸಿದ ರುಡ್‌ಸೆಟ್ ಸಂಸ್ಥೆ ಇಂದುರಾಷ್ಟ್ರಮಟ್ಟದಲ್ಲಿ ಮನ್ನಣೆ ಪಡೆದಿದೆಎಂದುವ ಮೆಚ್ಚುಗೆ ವ್ಯಕ್ತ ಪಡಿಸಿದರು.
ಕಳೆದ ಎಂಟು ವರ್ಷಗಳಲ್ಲಿ ಪ್ರತಿ ವರ್ಷ ಎಸ್.ಎಸ್.ಎಲ್.ಸಿ.ಪಬ್ಲಿಕ್ ಪರೀಕ್ಷೆಯಲ್ಲಿ ಶೇ.ನೂರು ಫಲಿತಾಂಶ ಪಡೆದಗುರುವಾಯನಕೆರೆ ಸರ್ಕಾರಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯಜಗನ್ನಾಥ್ ಮತ್ತುಆಸರೆ ಸಂಘಟನೆಯ ಸಕ್ರಿಯಕಾರ್ಯಕರ್ತ ಗೋಪಾಲಕೃಷ್ಣ ಅವರನ್ನುಗೌರವಿಸಲಾಯಿತು.
ಸಿಂಡಿಕೇಟ್ ಬ್ಯಾಂಕಿನ ಪ್ರಾಂತೀಯ ಪ್ರಬಂಧಕಆರ್.ರಾಘವೇಂದ್ರ, ಮತ್ತು ಪುತ್ತೂರು ಶಾಖಾ ಪ್ರಬಂಧಕ ಕುಮಾರ್, ರುಡ್‌ಸೆಟ್‌ನ ಹಿರಿಯಉಪನ್ಯಾಸಕರಾದಜೇಮ್ಸ್‌ಅಬ್ರಾಹಂ ಮತ್ತುಅನಸೂಯ, ಸುನಿಲ್ ರೈ ಬೆಳ್ಳಾರೆ ಉಪಸ್ಥಿತರಿದ್ದರು.
ಆಸರೆ ಅಧ್ಯಕ್ಷ ವೆಂಕಟ್ರಮಣ ಪುಣಚ ಸ್ವಾಗತಿಸಿದರು.ಕಾರ್ಯದರ್ಶಿ ಪ್ರಶಾಂತ್‌ಕುದ್ಯಾಡಿಧನ್ಯವಾದವಿತ್ತರು.
ಕಡಬದ ನಾಗರಾಜ, ಎನ್.ಕೆ.ಮತ್ತುಪ್ರಶಾಂತ್ ಲಾಲ ಕಾರ್ಯಕ್ರಮ ನಿರ್ವಹಿಸಿದರು.
Click this button or press Ctrl+G to toggle between Kannada and English