ಬೆಳ್ತಂಗಡಿ : ಗುಜರಾತ್ ರಾಜ್ಯದ ಬರೋಡಾ ನಿವಾಸಿ, ಶಶಿ ಕೇಟರಿಂಗ್ ಸರ್ವಿಸ್‌ನ ಮಾಲಿಕ, ಗುಜರಾತ್ ತುಳು ಸಂಘ ಬರೋಡ ಅಧ್ಯಕ್ಷ, ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಇದರ ಗುಜರಾತ್ ರಾಜ್ಯ ಘಟಕದ ಪ್ರಧಾನ ಸಂಘಟಕ ಶಶಿಧರ ಬಿ.ಶೆಟ್ಟಿ ಇವರು ಅತಿವೃಷ್ಟಿಯಿಂದ ಬರೋಡಾದ ಸುಮಾರು 30-40 ಸಾವಿರ ಜನರ ವಾಸ್ತವ್ಯದ ಜಾಲಾವೃತ ಪ್ರದೇಶಗಳಿಗೆ ತೆರಳಿ ಅಲ್ಲಿನ ನಿರಾಶ್ರಿತರಿಗೆ ಆಹಾರಪೊಟ್ಟಣ, ಲಕ್ಷಾಂತರ ಲೀಟರ್ ನೀರು ಬಾಟಲಿಗಳನ್ನು ನೀಡಿ ಅಭಯಸ್ತ ಚಾಚಿ ಮಾನವತೆ ಮೆರೆದರು.
ಬರೋಡಾದ ಹೆಸರಾಂತ ಪ್ರತಿಷ್ಠಿತ ಯುವೋದ್ಯಮಿ, ಕೊಡುಗೈದಾನಿ, ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಗುರುವಾಯನಕೆರೆ (ಸದ್ಯ ಬೆಳ್ತಂಗಡಿ ಶಕ್ತಿನಗರ ಮೂಲತಃ) ಶಶಿಧರ ಶೆಟ್ಟಿ ತನ್ನ ಮಿತ್ರವೃಂದ, ಸಹದ್ಯೋಗಿ ಬಳಗವನ್ನೊಳಗೊಂಡ ಸೇವಾ ಸೈನಿಕರೊಂದಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣ ತಂಡ, ಸ್ಥಾನೀಯ ಅಗ್ನಿಶಾಮಕ ದಳ, ಪೋಲಿಸ್ ಮುಖ್ಯಸ್ಥರ ಸಹಯೋಗದೊಂದಿಗೆ ವಿದ್ಯುಚ್ಛಕ್ತಿ ಕಡಿತಗೊಂಡ ಸ್ಥಳಗಳಿಗೂ ವಿಶೇಷ ಬೆಳಕಿನ ಸಹಾಯ ಪಡೆದು ಬೋಟುಗಳಲ್ಲಿ ಹಗಲಿರುಳು ಎನ್ನದೆ ಕೋಸ್ಟ್‌ಗಾರ್ಡ್ ದೋನಿಗಳಲ್ಲಿ ಸ್ವತಃ ಮನೆಮನೆಗೆ ಸಾಗಿ ಸಹಾಯಸ್ತ ಚಾಚಿದರು.
ಸಾವಿರಾರು ನೌಕರರ ಧನಿಯಾಗಿರುವ ಶಶಿಧರ್ ಶೆಟ್ಟಿ ಸ್ವತಃ ನೀರು ಬಾಟಲಿಗಳನ್ನು ಹೆಗಲನ್ನೇರಿಸಿ, ಇಲ್ಲಿನ ತುಳು-ಕನ್ನಡಿಗರನ್ನು ಒಗ್ಗೂಡಿಸಿ ನಿರಾಶ್ರಿರಲ್ಲಿ ಧಾವಿಸಿದರು. ಬರೋಡಾ ಸಂಸದ ರಂಜನ್‌ಬೆನ್ ಧನಂಜಯ್ ಭಟ್, ಸ್ಥಳೀಯ ಶಾಸಕರ, ರಿಫೈನರಿ, ಕೈಗಾರಿಕೋದ್ಯಮ, ಕಂಪೆನಿಗಳ ಸಹಕಾರ, ಆದೇಶಾನುಸಾರ ನೀರು, ಚಹಾ, ತಿಂಡಿತಿನಿಸು, ಉಪಹಾರಗಳ ಸಾವಿರಾರು ಆಹಾರ ಪೊಟ್ಟಣಗಳನ್ನು ಸಿದ್ಧಪಡಿಸಿ ಸರಕುವಾಹನಗಳಲ್ಲಿ ತುಂಬಿಸಿ ಮನೆಮನೆಗೆ ತಲುಪಿಸುವಲ್ಲಿ ಕಾರ್ಯನಿರತರಾದರು. ಸೇವೆಯೊಂದಿಗೆ ಮಾನವೀಯತೆಯನ್ನು ಮೆರೆದರು. ಮಧನ್ ಕುಮಾರ್ ಸೇರಿದಂತೆ ಅನೇಕರು ಸಹಕರಿಸಿದರು.
Click this button or press Ctrl+G to toggle between Kannada and English