ಮಂಗಳೂರು : ನಗರದ ಕುಡುಪು ಶ್ರೀ ಅನಂತ ಪದ್ಮನಾಭ ದೇವಾಲಯದಲ್ಲಿ ನಾಗರಪಂಚಮಿ ಪ್ರಯುಕ್ತ ಭಕ್ತರು ದೇವರಿಗೆ ಕ್ಷೀರಾಭಿಷೇಕ, ಸೀಯಾಳಾಭಿಷೇಕ ನೆರವೇರಿಸಿದರು.
ಮುಂಜಾನೆ ಐದು ಗಂಟೆಯಿಂದ ಮಧ್ಯಾಹ್ನ ಮಹಾಪೂಜೆಯವರೆಗೆ ಭಕ್ತರು ನಾಗ ದೇವರಿಗೆ ಸೀಯಾಳಭಿಷೇಕ, ಕ್ಷೀರಾಭಿಷೇಕ ನೆರವೇರಿಸುತ್ತಾರೆ. ನಾಗ ದೇವರ ನೂರಾರು ಮೂರ್ತಿಗಳಿಗೆ ಭಕ್ತರು ನೀಡಿದ ಸೀಯಾಳದ ನೀರು ಮತ್ತು ಹಾಲನ್ನು ದೇವರಿಗೆ ಸಮರ್ಪಿಸಲಾಯಿತು.
ಕುಡುಪು ದೇವಾಲಯದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಬಂದು ನಾಗರಪಂಚಮಿ ಪ್ರಯುಕ್ತ ಪ್ರಾರ್ಥನೆ ಸಲ್ಲಿಸಿದ್ದು ವಿಶೇಷವಾಗಿದ್ದು, ಎಲ್ಲರ ಗಮನ ಸೆಳೆಯಿತು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದುಗಳ ಪ್ರತಿ ಕುಟುಂಬಗಳು ತಮ್ಮ ನಾಗ ದೇವರ ಮೂಲ ಸ್ಥಾನಗಳಿಗೆ ತೆರಳಿ ಕ್ಷೀರಾಭಿಷೇಕ, ಸೀಯಾಳಭಿಷೇಕ ನೆರವೇರಿಸುತ್ತಾರೆ.
Click this button or press Ctrl+G to toggle between Kannada and English