ಬಕ್ರೀದ್ ನಿಮಿತ್ತ ಗೋಹತ್ಯೆ ತಡೆಯಲು ದಕ್ಷಿಣ ಕನ್ನಡ ಅಪರ ಆಯುಕ್ತರಿಗೆ ಮನವಿ

8:24 PM, Tuesday, August 6th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

bakrid cow ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಮತ್ತು ಗೋರಕ್ಷಕ ಸಂಘಟನೆಗಳಿಂದ ದಕ್ಷಿಣ ಕನ್ನಡ ಅಪರ ಆಯುಕ್ತರಾದ ಎಂ. ಜೆ. ರೂಪ ಇವರಿಗೆ ಬಕ್ರೀದ್ ನಿಮಿತ್ತ ಗೋಹತ್ಯೆ ತಡೆಯಲು ಅಗಷ್ಟ 6 , ಶುಕ್ರವಾರ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಂನವಯಕರಾದ ಶ್ರೀ ಚಂದ್ರ ಮೊಗೇರ್, ಶ್ರೀ ಯೋಗೀಶ್ ಅಶ್ವಥಪುರ, ಸೌ ಉಮಾ, ಶ್ರೀ ರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಶೆಟ್ಟಿ ಅಡ್ಯಾರ್, ವಿಭಾಗ ಪ್ರಧಾನ ಕಾರ್ಯದರ್ಶಿ ಹರೀಶ್ ಅಮ್ಟಾಡಿ,ಜಿಲ್ಲಾ ಅದ್ಯಕ್ಷ ಪ್ರದೀಪ್ ಮೂಡುಶೆಡ್ಡೆ, ಜಿಲ್ಲಾ ಕಾರ್ಯದರ್ಶಿ ಹರೀಶ್ ಬೊಕ್ಕಪಟ್ನ,ನಗರ ಕಾರ್ಯದರ್ಶಿ ವೆಂಕಟೇಶ್ ಪಡಿಯಾರ್,ಪುರಂದರ, ರವಿ ಮೂಡುಶೆಡ್ಡೆ ಮುಂತಾದವರು ಉಪಸ್ಥಿತರಿದ್ದರು.

ಮನವಿ ಮುಖಾಂತರ ಮುಂದಿನ ಬೇಡಿಕೆಗಳನ್ನು ಇಡಲಾಯಿತು:

1. ಬಕ್ರೀದ್ ಸಂದರ್ಭದಲ್ಲಿ ಅಕ್ರಮಆಕ್ರಮವಾಗಿ ಗೋಹತ್ಯೆ ಮಾಡುವುದು, ಅಕ್ರಮ ಗೋ ಸಾಗಾಣಿಕೆ ಮಾಡುವುದರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು.

2. ಬಕ್ರೀದ್ ನ ದಿನ ಪ್ರಾಣಿವಧೆಯನ್ನು ಮಾಡುವುದಕ್ಕೆ 1ದಿನದ ಅನುಮತಿಯನ್ನು ನೀಡಲಾಗುತ್ತದೆ, ಈ ಅನುಮತಿ ಕಾನೂನು ಬಾಹಿರ ಆಗಿದ್ದು ಯಾವುದೇ ಕಾರಣದಿಂದ 1 ದಿನದ ಅನುಮತಿಯನ್ನು ನೀಡಬಾರದು.

3. ಹೀಗೆ ‘ಏಕೋ ಫ್ರೆಂಡ್ಲಿ ಗಣೇಶೋತ್ಸವ’ , ‘ಏಕೋ ಫ್ರೆಂಡ್ಲಿ ಹೋಳಿ ‘ , ‘ಏಕೋ ಫ್ರೆಂಡ್ಲಿ ದೀಪಾವಳಿ’ ಇತ್ಯಾದಿಗಳ ಬಗ್ಗೆ ಸರ್ಕಾರದಿಂದ ಯಾವ ರೀತಿ ಹಿಂದುಗಳಿಗೆ ಆಹ್ವಾನಿಸಲಾಗುತ್ತದೆಯೋ ಅದೇ ರೀತಿ ‘ಏಕೋ ಫ್ರೆಂಡ್ಲಿ ಬಕ್ರೀದ್’ ನಡೆಸುವುದಕ್ಕೆ ಸರ್ಕಾರ ಆಹ್ವಾನ ನೀಡಬೇಕು.

4. ಸಂಪೂರ್ಣ ಭಾರತದಲ್ಲಿ ಗೋಹತ್ಯೆ ನಿಷೇದ ಕಾನೂನನ್ನು ಜಾರಿಗೊಳಿಸಬೇಕು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English