ಅಪಾಯದ ಮಟ್ಟಕ್ಕೆ ಮುಟ್ಟಿದ ಕುಮಾರಧಾರ ಹಾಗೂ ನೇತ್ರಾವತಿ ನದಿ ನೀರಿನ ಹರಿಯು

12:13 PM, Thursday, August 8th, 2019
Share
1 Star2 Stars3 Stars4 Stars5 Stars
(No Ratings Yet)
Loading...

Bantwala-Natravatiಮಂಗಳೂರು : ದ.ಕ. ಜಿಲ್ಲೆಯ ಕುಮಾರಧಾರ ಹಾಗೂ ನೇತ್ರಾವತಿ ನದಿ ಅಪಾಯದ ಮಟ್ಟದ ಸನಿಹದಲ್ಲಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸೂಚನೆ ನೀಡಿದ್ದಾರೆ.

ಬಂಟ್ವಾಳದಲ್ಲಿ ನೇತ್ರಾವತಿ ನದಿ ನೀರಿನ ಹರಿಯು 8.4 ಕ್ಕೆ ಮುಟ್ಟಿದ್ದು, ಅಪಾಯದ ಮಟ್ಟ 8.5 ಆಗಿದೆ. ಉಪ್ಪಿನಂಗಡಿ ಯಲ್ಲಿ ನೇತ್ರಾವತಿ ನದಿ ನೀರಿನ ಹರಿಯು ಗರಿಷ್ಟ 29.5 ಇದ್ದು ಈಗ  30.00 ಕ್ಕೆ ಮುಟ್ಟಿದ್ದು ಅಪಾಯದ ಮಟ್ಟ ಮೀರಿದೆ. ಉಪ್ಪಿನಂಗಡಿ ಯಲ್ಲಿ ಕುಮಾರಧಾರ ನದಿ  ನೀರಿನ ಹರಿಯು ಗರಿಷ್ಟ 28.5 ಇದ್ದು ಈಗ  30.00 ಕ್ಕೆ ಮುಟ್ಟಿದ್ದು ಅಪಾಯದ ಮಟ್ಟ ಮೀರಿದೆ.

ಪ್ರಮುಖ ಅಪಾಯ ಸ್ಥಳಗಳಲ್ಲಿ ನೋಡಲ್ ಅಧಿಕಾರಿಗಳ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿಯ ಅವಲೋಕನ ನಡೆಸುತ್ತಿದ್ದಾರೆ.

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಶಿರಾಡಿ ಗ್ರಾಮದ ಉದನೆ ಎಂಬಲ್ಲಿ ರಸ್ತೆಗೆ ಕೆಂಪುಹೊಳೆ(ಅಡ್ಡಹೊಳೆಯ)ಯ ನೆರೆ ನೀರು ನುಗ್ಗಿದೆ. ಇದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯುಂಟಾಗಿದೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಬದಲಿ ರಸ್ತೆಯಾಗಿ ಪೆರಿಯಶಾಂತಿ, ಮರ್ದಾಳ, ಸುಬ್ರಮಣ್ಯ ಕೈಕಂಬ ಗುಂಡ್ಯ, ರಸ್ತೆಯನ್ನು ಅವಲಂಬಿಸುವಂತೆ ಸೂಚಿಸಲಾಗಿದೆ.

ಕಳೆದ ರಾತ್ರಿ ಸುರಿದ ಮಳೆ, ಬಿರುಗಾಳಿಗೆ ಬೋಳಾರ ಎಮ್ಮೆಕೆರೆ ರಸ್ತೆಯ ಮಾರಿಗುಡಿ ಬಳಿ ಆಶೋಕ ಶೆಟ್ಟಿ ಎಂಬವರ ಮನೆ ಮೇಲೆ ಬೃಹತ್ ಮರ ಹಾಗೂ ತೆಂಗು ಉರುಳಿಬಿದ್ದಿದೆ. ಇದರಿಂದ ಸುಮಾರು 2 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಮರವನ್ನು ತೆರವುಗೊಳಿಸಿದರು. ಬೋಳಾರ ಮಾರಿಗುಡಿಯಿಂದ ಮಂಗಳಾದೇವಿಗೆ ಸಾಗುವ ರಸ್ತೆಯಲ್ಲಿ ಬೃಹತ್ ಮರವೊಂದು ಬಿದ್ದ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English