ಮಂಗಳೂರು : ಕರ್ನಾಟಕ ಋಣ ಪರಿಹಾರ ಕಾಯ್ದೆಗೆ ರಾಷ್ಟ್ರಪತಿಗಳು ಜುಲೈ 16 ರಂದು ಅಂಕಿತ ಮಾಡಿರುವ ಹಿನ್ನಲೆಯಲ್ಲಿ ಕರ್ನಾಟಕ ಋಣ ಪರಿಹಾರ ಕಾಯ್ದೆಯು ಆದೇಶ ಹೊರಡಿಸಿದ ದಿನದಿಂದ ಒಂದು ವರ್ಷದ ಅವಧಿಗೆ ಮಾತ್ರ ಜಾರಿಯಲಿದೆ. ಋಣ ಪರಿಹಾರ ಪಡೆಯಲು ಕಾಯ್ದೆ ಜಾರಿಗೆ ಬಂದ ದಿನದಿಂದ 90 ದಿನಗಳೊಳಗಾಗಿ ಆಚಿiÀiÁ ವಿಭಾಗದ ಉಪವಿಭಾಗಾಧಿಕಾರಿಗಳಿಗೆ ಆಯಾ ಪ್ರದೇಶದಲ್ಲಿ ವಾಸಿಸುವ “ಋಣಿ” ಎಂದರೆ ಒಬ್ಬ ಭೂರಹಿತ ಕೃಷಿ ಕಾರ್ಮಿಕ, ದುರ್ಬಲ ವರ್ಗಕ್ಕೆ ಸೇರಿದ ಒಬ್ಬ ಅಥವಾ ಒಬ್ಬ ಸಣ್ಣ ರೈತರು ಋಣ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
ಈ ಕಾಯ್ದೆಯ ಸದುದ್ದೇಶವು ಖಾಸಗಿ ಲೇವಾದೇವಿ/ಗಿರವಿದಾರರಿಂದ ಪಡೆದಂತಹ ಸಾಲದ ಋಣದಿಂದ ಮುಕ್ತಗೊಳಿಸುವ ಸಲುವಾಗಿ ಹಾಗೂ ರಾಜ್ಯದಲ್ಲಿರುವ ಸಣ್ಣ ರೈತರು, ಭೂರೈತ ಕೃಷಿ ಕಾರ್ಮಿಕರು ಮತ್ತು ದುರ್ಬಲ ವರ್ಗಗಳ ಜನರಿಗೆ ಸಾಲದ ಋಣ ಪರಿವಾರವನ್ನು ಒದಗಿಸಲು ಸದರಿ ಕಾಯ್ದೆಯು ಜಾರಿಗೆ ಬಂದಿರುತ್ತದೆ.
ಕರ್ನಾಟಕ ಸರ್ಕಾರದ ಈ ಮಹತ್ತರ ಕಾರ್ಯರೂಪದ ಋಣ ಪರಿಹಾರ ಯೋಜನೆಯು ಕಾಯ್ದೆಯ ಮೂಲಕ ಜುಲೈ 23ರಿಂದ ಜಾರಿಗೆ ಬಂದಿದ್ದು, ಭೂರೈತ ಕೃಷಿ ಕಾರ್ಮಿಕರು, ಸಣ್ಣ ರೈತರು ಮತ್ತು ದುರ್ಬಲ ವರ್ಗಗಳ ಜನರಿಗೆ ಋಣದಿಂದ ಪರಿಹಾರವನ್ನು ಒದಗಿಸುವುದು ಮತ್ತು ಅವರ ಆರ್ಥಿಕ ಅಭಿವೃದ್ಧಿಯನ್ನು ಕಾಣುವ ಹಿತದೃಷ್ಟಿಯಿಂದ ಕರ್ನಾಟಕ ಋಣ ಪರಿಹಾರ ವಿಧೇಯಕ ಜಾರಿಗೆ ತರಲಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ಖಾಸಗೀ ಲೇವಾದೇವಿ, ಗಿರವಿದಾರರಿಂದ ಸಾಲ ಪಡೆದವರು ತವ್ಮ್ಮ ವ್ಯಾಪ್ತಿಯ ಎ.ಸಿ. ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಸಹಕಾರ ಸಂಘಗಳ ಉಪನಿಬಂಧಕರು, ದ.ಕ ಜಿಲ್ಲೆ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.
Click this button or press Ctrl+G to toggle between Kannada and English
August 11th, 2019 at 10:12:27
ಸರ್ ನಾನು ಚಿನ್ನವನ್ನು ಒಂದು ಗಿರವಿ ಅಂಗಡಿಯಲ್ಲಿ ಅಡ ಇಟ್ಟಿದ್ದೇನೆ ಇದನ್ನು ಋಣ ಮುಕ್ತ ಅರ್ಜಿ ಸಲ್ಲಿಸಲು ಏನು ಮಾಡಬೇಕು ಸ್ವಲ್ಪ ವಿವರವಾಗಿ ತಿಳಿಸಿ