ಉಡುಪಿ, : ಉಡುಪಿ ತಾಲೂಕು ಪಂಚಾಯತ್‌ನ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿಯ ನೀತಾ ಗುರುರಾಜ್ ಪೂಜಾರಿ ಹಾಗೂ ಭುಜಂಗ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕುಂದಾಪುರ ಉಪವಿಭಾಗಾಧಿಕಾರಿ ಡಾ.ಮಧುಕೇಶ್ವರ್ ಅವರು ಚುನಾವಣಾಧಿಕಾರಿಯಾಗಿ ಉಡುಪಿ ತಾಪಂನಲ್ಲಿ ಈ ಆಯ್ಕೆ ನಡೆಯಿತು.
41 ಸದಸ್ಯ ಬಲದ ಉಡುಪಿ ತಾಲೂಕು ಪಂಚಾಯತ್‌ನಲ್ಲಿ ಬಿಜೆಪಿ 27 ಸ್ಥಾನಗಳನ್ನು ಪಡೆದು ಸ್ಪಷ್ಟ ಬಹುಮತವನ್ನು ಹೊಂದಿದೆ. 2016ರ ಮೇ 26ರಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದ ನಳಿನಿ ಪ್ರದೀಪ್ ರಾವ್ ಹಾಗೂ ರಾಜೇಂದ್ರ ಪಿ.ಪಂದಬೆಟ್ಟು ಅವರು ಕಳೆದ ತಿಂಗಳು ಸ್ವಪ್ರೇರಣೆಯಿಂದ ತಮ್ಮ ಸ್ಥಾನಗಳಿಗೆ ರಾಜಿನಾಮೆ ಸಲ್ಲಿಸಿದ್ದು, ಜಿಲ್ಲಾಧಿಕಾರಿ ಅವರು ಈ ರಾಜಿನಾವೆು ಪತ್ರಗಳನ್ನು ಅಂಗೀಕರಿಸಿದ್ದರು.
ತಾಪಂನ ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರಾವಧಿ ಐದು ವರ್ಷಗಳದ್ದಾದರೂ, ಮೊದಲ ಸಲ ಆಯ್ಕೆ ಮಾಡುವ ಸಂದರ್ಭದಲ್ಲಿ ಆದ ಒಪ್ಪಂದದಂತೆ ಮೂರು ವರ್ಷಗಳ ಆಡಳಿತದ ಬಳಿಕ ಅವರು ಸ್ಥಾನವನ್ನು ತೆರವುಗೊಳಿಸಿದ್ದಾರೆ. ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ನೀತಾ ಗುರುರಾಜ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಭುಜಂಗ ಶೆಟ್ಟಿ ಅವರನ್ನು ಪಕ್ಷ ಆಯ್ಕೆ ಮಾಡಿದ್ದು, ಇದೀಗ ಅವರಿಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Click this button or press Ctrl+G to toggle between Kannada and English