ಪುತ್ತೂರು : ಕಾರು ಚಾಲಕ ಮೃತ್ಯು ; ಬಸ್ ಪುಡಿಗೈದ ಆಕ್ರೋಶಿತರು

6:45 PM, Monday, August 12th, 2019
Share
1 Star2 Stars3 Stars4 Stars5 Stars
(No Ratings Yet)
Loading...

Puttur-Accidentಪುತ್ತೂರು : ಪುತ್ತೂರಿನ ಕಬಕದ ಸಮೀಪ ಖಾಸಗಿ ಬಸ್ ಕಾರೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಮೃತಪಟ್ಟ ಘಟನೆ ಆ. 12 ರ ಸೋಮವಾರ  ಪೊಲ್ಯದಲ್ಲಿ ನಡೆದಿದೆ.

ಮಂಗಳೂರು – ಪುತ್ತೂರು ನಡುವೆ ಸಂಚರಿಸುವ ಧರಿತ್ರಿ ಬಸ್ ಕಾರಿಗೆ ಢಿಕ್ಕಿ ಹೊಡೆದಿದ್ದು ಘಟನೆಯಲ್ಲಿ ಕಾರು ಚಾಲಕ ಹಕೀಮ್ ಸಾವನ್ನಪ್ಪಿದ್ದಾರೆ. ಹಕೀಮ್ ಪುತ್ತೂರಿನ ಈಶ್ವರಮಂಗಲದ ನಿವಾಸಿಯಾಗಿದ್ದಾರೆ.

ಘಟನೆ ನಡೆದ ತಕ್ಷಣ ಆಕ್ರೋಶಗೊಂಡ ಸ್ಥಳೀಯರೂ ಬಸ್ ಪುಡಿಗೈದಿದ್ದಾರೆ. ಸ್ಥಳಕ್ಕೆ ಪುತ್ತೂರು ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.

Putturu-Accident

Putturu-Accident

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English