ಮಂಗಳೂರು: ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಹಭಾಗಿತ್ವದಲ್ಲಿ ನೆರೆ ಸಂತ್ರಸ್ತರಿಗೆ ನೀಡಲಾದ ಬಟ್ಟೆಬರೆ ಹಾಗೂ ದಿನಬಳಕೆ ವಸ್ತುಗಳನ್ನು ಬೆಳ್ತಂಗಡಿ ಹಾಗೂ ಚಾರ್ಮಾಡಿ ಗ್ರಾಮಸ್ಥರಿಗೆ ಕೊಂಡೊಯ್ಯುವ ಲಾರಿಗೆ ಕರ್ನಾಟಕ ರಾಜ್ಯ ಅಖಿಲ ಭಾರತ್ ಕಾಂಗ್ರೆಸ್ ಟ್ರಾನ್ಸ್ ಪೋಟ್೯ ಸುನೀಲ್ ಪಾಯ್ಸ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಮಂಗಳೂರಿನ ಸ್ಟೇಟ್ ಬ್ಯಾಂಕ್ ಸಮೀಪ ಇಂದು ಚಾಲನೆ ನೀಡಿದರು.
ಈ ಸಂದರ್ಭ ದ.ಕ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ, ಸಂತ್ರಸ್ತರಿಗೆ ಸಹಕರಿಸುವ ಮೂಲಕ ನೊಂದವರ ಬಾಳಿಗೆ ಸ್ಫೂರ್ತಿ ತುಂಬುವ ಕಾರ್ಯವಾಗುತ್ತದೆ. ದಾನಿಗಳ ಔದಾರ್ಯದಿಂದ ಸಂತ್ರಸ್ತರ ದಿನಬಳಕೆ ವಸ್ತುಗಳನ್ನು ಪೂರೈಸಲು ಸಾಧ್ಯವಾಗಿದೆ. ಇದು ಎರಡನೇ ಹಂತವಾಗಿ ಸಂತ್ರಸ್ತರಿಗೆ ನೆರವು ನೀಡುವ ಕಾರ್ಯವಾಗಿದೆ. ಜಿಲ್ಲೆಯ ಜನರ ನೋವಿಗೆ ಸ್ಪಂಧಿಸಿದ ಮಹಾರಾಷ್ಟ್ರದ ಪ್ರತಿಯೊಬ್ಬರಿಗೂ ಚಿರ ಋಣಿ ಎಂದರು.
ಈ ಸಂದರ್ಭ ಪತ್ರಕರ್ತರಾದ ವಸಂತ್.ಎನ್ ಕೊಣಾಜೆ, ಆರೀಫ್ ಕಲ್ಕಟ್ಟ, ಮೋಹನ್ ಕುತ್ತಾರ್, ಅಶ್ವಿನ್ ಕುತ್ತಾರ್, ತೇಜೇಶ್ ಗಟ್ಟಿ, ಉಳ್ಳಾಲ್ ಚಿಂತನ್ ಕುಮಾರ್, ಕೀರ್ತನ್ ಉದ್ಯಮಿಗಳಾದ ಸಹಬಾಝ್ ಖಾದರ್, ಮುಜೀಬ್ ರೆಹ್ಮಾನ್, ಉಪಸ್ಥಿತರಿದ್ದರು.
ಉಳ್ಳಾಲ ವಲಯದ ಪತ್ರಕರ್ತರು ವಸಂತ ಕೋಣಾಜೆ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕಿನ ವಿವಿಧೆಡೆ ನೆರೆ ಸಂತ್ರಸ್ತರಿಗೆ ದಿನಬಳಕೆಯ ವಸ್ತುಗಳು ಆಹಾರ ಸಾಮಗ್ರಿಗಳು ಹಾಗೂ ಬಟ್ಟೆ ಬರೆಗಳನ್ನು ವಿತರಿಸಿದರು.
Click this button or press Ctrl+G to toggle between Kannada and English