ಉಡುಪಿ: ಪೇಜಾವರ ಸ್ವಾಮೀಜಿಯ ಸಹೋದರ ಎಂದ ಕ್ರಿಶ್ಚಿಯನ್ ಧರ್ಮದ ನಕಲಿ ಪ್ರಚಾರಕನ ವಿರುದ್ಧ ದೂರು

3:08 PM, Friday, August 16th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

pejaavaraಉಡುಪಿ : ಕ್ರೈಸ್ತ ಧರ್ಮದ ಪ್ರಚಾರಕ ಎಂದು ಹೇಳಲಾದ ವ್ಯಕ್ತಿಯೊಬ್ಬರು ಪೇಜಾವರ ಶ್ರೀಗಳ ಸ್ವಾಮೀಜಿ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸಂಸ್ಕಾರ ಭಾರತಿ ಉಡುಪಿ ಜಿಲ್ಲಾ ಸಂಚಾಲಕ ವಾಸುದೇವ ಭಟ್ ಪೆರಂಪಳ್ಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ರಾಜಾಜಿನಗರ ಚರ್ಚ್‌ನಲ್ಲಿ ಧಾರ್ಮಿಕ ವಿಷಯಗಳನ್ನು ಒಳಗೊಂಡ ಕರಪತ್ರಗಳನ್ನು ಪ್ರಚಾರದ ರೂಪದಲ್ಲಿ ವಿತರಿಸಿದ್ದು, ಆ ವ್ಯಕ್ತಿಯೂ ಕರಪತ್ರದಲ್ಲಿ ತಾನು ಪೇಜಾವರ ಮಠದ ಶ್ರೀ ಶ್ರೀವಿಶ್ವೇಶತೀರ್ಥ ಸ್ವಾಮೀಜಿಯ ಸಹೋದರ ಪಾಸ್ಟರ್ ವಸಂತ ಆರ್ . ಪೈ ಎಂದು ಉಲ್ಲೇಖಿಸಿದ್ದಾನೆ ಎಂದು ಅವರು ಹೇಳಿದ್ದಾರೆ.

ಮಾತ್ರವಲ್ಲದೆ, ಮೈಸೂರಿನಲ್ಲಿ ಚತುರ್ಮಾಸ್ಯ ವ್ರತವನ್ನು ಆಚರಿಸುತ್ತಿರುವ ಪೇಜಾವರ ಶ್ರೀಗಳಿಗೆ ,”ತಮ್ಮ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದಾರೆ” ಎಂದು ತಿಳಿದಿದ್ದು ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳನ್ನು ಕೋರುತ್ತೇನೆ ಎಂದು ಅವರು ತಿಳಿಸಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಪೇಜಾವರ ಶ್ರೀಗಳ ಹೆಸರು ದುರ್ಬಳಕೆ ಮಾಡಿಕೊಂಡರೆ ಅಂಥವರ ವಿರುದ್ದ ಹೋರಾಟ ಮಾಡಬೇಕಾಗುತ್ತದೆ ವಾಸುದೇವ ಭಟ್ ಪೆರಂಪಳ್ಳಿ ಎಚ್ಚರಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English