ಮಂಗಳೂರು : ವಾಹನಗಳ ಕರ್ಕಶ ಹಾರ್ನ್ ವಿರುದ್ಧ ನಗರದ ಪಾಂಡೇಶ್ವರ ಸಂಚಾರಿ ಪೊಲೀಸರು ಇಂದು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಸರಕಾರಿ ವಾಹನಗಳೂ ಸೇರಿದಂತೆ ಸುಮಾರು 70ಕ್ಕೂ ಹೆಚ್ಚು ವಾಹನಗಳನ್ನು ತಪಾಸಣೆ ನಡೆಸಿದ ಪೊಲೀಸರು ಈ ಪೈಕಿ ಸುಮಾರು 15 ವಾಹನಗಳಲ್ಲಿ ಅಳವಡಿಸಲಾಗಿದ್ದ ಕರ್ಕಶ ಹಾರ್ನ್ ಗಳನ್ನು ವಶಪಡಿಸಿಕೊಂಡು ದಂಡ ವಿಧಿಸಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿರುವ ಹರ್ಷ ಅವರು, ‘ಕರ್ಕಶ ಹಾರ್ನ್ ವಿರುದ್ಧ ವಿಶೇಷ ಕಾರ್ಯಾಚರಣೆಯನ್ನು ನಡೆಸಲಾಗಿದ್ದು ಇನ್ನು ಮಂಗಳೂರು ಸ್ವಲ್ಪ ಮಟ್ಟಿಗೆ ಶಾಂತವಾಗಬಹುದು ಎಂದು ಬರೆದುಕೊಂಡಿದ್ದಾರೆ.’
Click this button or press Ctrl+G to toggle between Kannada and English