ಮಂಗಳೂರು : ಹಿಂದೂ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ವ್ರತವು ಒಂದಾಗಿದ್ದು ಶ್ರಾವಣಮಾಸದ ಎರಡನೇ ಶುಕ್ರವಾರದಂದು ಬರುವ ಈ ಹಬ್ಬವನ್ನು ಪ್ರಮುಖವಾಗಿ ಕನಾ೯ಟಕ, ತಮಿಳುನಾಡು, ಆಂದ್ರಪ್ರದೇಶ ರಾಜ್ಯಗಳಲ್ಲಿ ವಿಶೇಶವಾಗಿ ಆಚರಿಸುತ್ತಾರೆ. ದೇವರಲ್ಲಿ ಆರೋಗ್ಯ, ಐಶ್ವಯ೯ ,ಆಯಸ್ಸು ವೃದ್ದಿಗಾಗಿ ಮಹಿಳೆಯರು ವಿಶೇಶ ಪ್ರಾಥ೯ನೆಯನ್ನು ಈ ಹಬ್ಬದಲ್ಲಿ ಸಲ್ಲಿಸುತ್ತಾರೆ.
ಮುಂಜಾನೆ ಬೇಗನೆ ಎದ್ದು ಅಭ್ಯಂಜನವನ್ನು ಮುಗಿಸಿ, ಶುಭ್ರವಾದ ಬಟ್ಟೆಯನ್ನು ದರಿಸಿಕೊಂಡು ಮನೆಯ ಮುಂದಿನ ಬಾಗಿಲಿಗೆ ರಂಗೋಲಿ ಹಾಕಿ, ಬಾಗಿಲಿಗೆ ಹಸಿರು ತೋರಣವನ್ನು ಕಟ್ಟಿ ಪೂಜಾಸಾಮಗ್ರಿಗಳನ್ನೆಲ್ಲಾ ತಯಾರು ಮಾಡಿಕೊಂಡು ಪೂಜೆಗೆ ಸಿದ್ದರಾಗುತ್ತಾರೆ.
ಮೊದಲು ಕಳಶವನ್ನು ಸ್ಥಾಪಿಸಿ ಅದಕ್ಕೆ ಲಕ್ಶ್ಮೀದೇವಿಯ ಮುಖವಾಡವನ್ನು ತೊಡಿಸಿ ನಂತರ ಅದಕ್ಕೆ ಚೆಂದವಾದ ಜರತಾರಿಯ ಸೀರೆಯನ್ನು ಉಡಿಸಿ ಆಭರಣಗಳಿಂದ ಅಲಂಕರಿಸಲಾಗುತ್ತದೆ. ಹೀಗೆ ಅಲಂಕ್ರುತವಾದ ಶ್ರೀ ವಲ್ಲಭೆಯನ್ನು ಬಾಳೆಯ ದಿಂಡಿನಿಂದ ಶೋಭಿತವಾದ ಮಂಟಪದಲ್ಲಿ ಸ್ಥಾಪಿಸಲಾಗುತ್ತದೆ.
ಹೀಗೆ ಸ್ಥಾಪಿತವಾದ ಲಕ್ಶ್ಮೀದೇವಿಗೆ ಅರಿಶಿನ, ಕುಂಕುಮ, ಗೆಜ್ಜೆವಸ್ತ್ರಗಳನ್ನು ವಿವಿಧ ಹೂ ಗಳಿಂದ ಅಲಂಕರಿಸಿ ಪೂಜೆ ಮಾಡಲಾಗುತ್ತದೆ. ಭಕ್ತಿಭಾವಗಳಿಂದ ತಮ್ಮ ಮನೆಗಳಲ್ಲಿ ಶಾಶ್ವತವಾಗಿ ನೆಲೆಸಿ ಹರಸು ಎಂದು ಬೇಡಿಕೊಳುತ್ತಾರೆ.
ವರಮಹಲಕ್ಶ್ಮೀವ್ರತಾಚರಣೆಯಿಂದ ಧನ, ಧಾನ್ಯ, ಆರೋಗ್ಯ, ಐಶ್ವಯ೯, ಆಯಸ್ಸು, ಸಂತಾನ, ಸೌಭಾಗ್ಯ ಗಳು ವೃದ್ದಿಯಾಗುತ್ತವೆ ಎಂಬ ಉಲ್ಲೇಖವು ಸ್ಕಂದಪುರಾಣದಲ್ಲಿದೆ. ವಿವಿಧ ಬಗೆಯ ಸಿಹಿ ತಿನಿಸುಗಳನ್ನು ಮಾಡಿ ದೇವಿಗೆ ಅಪಿ೯ಸಲಾಗುತ್ತದೆ. ಹೀಗೆ ಬಗೆಬಗೆಯ ಸಿಹಿತಿನಿಸುಗಳನ್ನು ಆಕೆಗೆ ಅಪಿ೯ಸಿ ಸಂಜೆಯ ವೇಳೆ ಮುತ್ತೈದೆಯರನ್ನು ಮನೆಗೆ ಆಮಂತ್ರಿಸಿ ಅವರಿಗೆ ಅರಿಶಿನ, ಕುಂಕುಮದ ಜೊತೆಗೆ ಮರದ ಬಾಗಣಳನ್ನು ನೀಡಲಾಗುತ್ತದೆ
ಕೊನೆಯಲ್ಲಿ ತಮ್ಮ ಸಂಕಷ್ಟಗಳನ್ನು ದೂರ ಮಾಡಿ ಸುಖಶಾಂತಿ ನೆಲೆಸಿ ಸಮೃದ್ದಿಯನ್ನು ದಯಪಾಲಿಸು ಎಂದು ಬೇಡುತ್ತ ಮುತೈದೆಯರು ಆರತಿಯನ್ನು ಬೆಳಗುತ್ತಾರೆ. ಹೀಗೆ ವರಮಹಲಕ್ಶ್ಮೀವ್ರತವು ತನ್ನದೆ ಆದ ವಿಶಿಷ್ಟ ಆಚರಣೆಯನ್ನು ಹೊಂದಿದೆ.
Click this button or press Ctrl+G to toggle between Kannada and English