ಕರಾವಳಿಯಲ್ಲಿ ಮತ್ತೆ ಉಂಟಾಗುತ್ತಿದೆ, ಡೆಂಗ್ಯೂ ಜ್ವರ

11:36 AM, Monday, August 26th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

dengueಮಂಗಳೂರು : ಕರಾವಳಿಯಲ್ಲಿ ಈಗ ಮಳೆ ಬಿಟ್ಟೂ ಬಿಟ್ಟು ಬರುತ್ತಿದ್ದು, ಆಗಾಗ ಬಿಸಿಲು ಕಾಣಿಸಿಕೊಳ್ಳುತ್ತಿದೆ. ಇದು ಸೊಳ್ಳೆ ಸಂತಾನಾಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಿ ಮತ್ತೆ ಡೆಂಗ್ಯೂ ಉಲ್ಬಣಿಸಲು ಕಾರಣವಾಗಬಹುದೇ ಎಂಬ ಭೀತಿ ಉಂಟಾಗಿದೆ.

ಈ ಕುರಿತು ಮಾತನಾಡಿರುವ ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ.ನವೀನ್‌ಚಂದ್ರ, ಶಂಕಿತ ಡೆಂಗ್ಯೂವಿನಿಂದ ಇದುವರೆಗೆ 11 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ 6 ಮಂದಿಯ ರಕ್ತವನ್ನು ಎಲಿಸಾ ಪರೀಕ್ಷೆಗೆ ಕಳುಹಿಸಲಾಗಿದೆ. ಉಳಿದವರ ರಕ್ತವನ್ನೂ ಪರೀಕ್ಷೆಗೆ ಕಳುಹಿಸಲಾಗುವುದು. ಜಿಲ್ಲೆಯಲ್ಲಿ ಪ್ರಾಥಮಿಕ ಪರೀಕ್ಷೆಯಲ್ಲಿ ಡೆಂಗ್ಯೂ ಪಾಸಿಟಿವ್ ಎಂಬ ವರದಿ ಬಂದಿರಬಹುದು, ಆದರೆ ಅದೆಲ್ಲವೂ ಡೆಂಗ್ಯೂ ಎಂದು ದೃಢಪಡಿಸಲಾಗದು ಎಂದು ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಡೆಂಗ್ಯೂ 152 ಮತ್ತು ಮಲೇರಿಯಾ ಪ್ರಕರಣ 63ಕ್ಕೆ ಏರಿಕೆಯಾಗಿದೆ. ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಅಶೋಕ್‌ ತಿಳಿಸಿದ್ದಾರೆ.

 

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English