ಮಂಗಳೂರು: ಮುಜರಾಯಿ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಸುಮಾರು 17 ಕೋಟಿ ರೂಪಾಯಿ ವೆಚ್ಚ ದಲ್ಲಿ ರಾಜ್ಯದ ಮುಜರಾಯಿ ಇಲಾಖೆಗೆ ಸಂಬಂಧಪಟ್ಟ ಸುಮಾರು 34,000 ದೇವಾಲಯಗಳಲ್ಲಿ ಮಳೆಗಾಗಿ ಪೂಜೆ-ಪ್ರಾಥ೯ನೆ ಯನ್ನು ಜುಲೈ 27 ಹಾಗೂ ಆಗಸ್ಟ್ 2 ರಂದು ಸಲ್ಲಿಸಲು ಅನುಮತಿ ಸೂಚಿಸಿದ್ದರು. ಅದರಂತೆ ಜುಲೈ 27 ಶುಕ್ರವಾರ ರಾಜ್ಯದ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಗಳಲ್ಲಿ ಬೆಳಗ್ಗಿನಿಂದಲೇ ವಿಶೇಷ ಪೂಜೆಗಳು, ಪ್ರಾಥ೯ನೆಗಳು ನಡೆದವು.
ಮಂಗಳೂರಿನ ವಿವಿಧ ದೇವಾಲಯಗಳಲ್ಲಿ ಶುಕ್ರವಾರ ವರಮಹಾಲಕ್ಶ್ಮಿ ಪೂಜೆಯ ಜೊತೆಯಲ್ಲಿಯೆ ಮಳೆಗಾಗಿ ವಿಶೇಷ ಪೂಜೆಗಳು ನಡೆದವು. ಮಂಗಳಾದೇವಿ ಹಾಗೂ ಕಟೀಲು ಶ್ರೀ ದುಗಾ೯ಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಆಚ೯ನೆಗಳ ಮೂಲಕ ಮಳೆಗಾಗಿ ಪ್ರಾಥಿ೯ಸಲಾಯಿತು.
ಉಡುಪಿ ಜಿಲ್ಲೆಯಲ್ಲಿನ ಕಡಿಯಾಳಿ ಶ್ರೀ ಮಹಿಷಮಧಿ೯ನಿ ದೇವಾಲಯದಲ್ಲಿ ಆಡಳಿತಾಧಿಕಾರಿಯಾದ ಗೋಕುಲ್ ದಾಸ್ ನಾಯ್ಕ್ ಇವರ ನೇತೃತ್ವದಲ್ಲಿ ವಿಶೇಷ ಹೋಮ ಹಾಗೂ ಪೂಜೆಯನ್ನು ಕೈಗೊಳ್ಳಲಾಯಿತು.
ಕೊಲ್ಲೂರಿನ ಶ್ರೀ ಮೂಕಾಂಬಿಕ ದೇವಾಲಯದಲ್ಲೂ ಮಳೆಗಾಗಿ ವಿಶೇಷ ಸಾಮೂಹಿಕ ಪ್ರಾಥ೯ನೆಯನ್ನು ಸಲ್ಲಿಸಲಾಯಿತು. ಈ ಧಾಮಿ೯ಕ ಕಾಯ೯ದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಮೊದಲಿಗೆ ಕಂಬಗಣಪತಿಗೆ ಪ್ರಾಥ೯ನೆಯನ್ನು ಸಲ್ಲಿಸಿ ಅನಂತರ ದೇವಿ ಮೂಕಾಂಬಿಕೆಗೆ ಪಂಚಾಮೃತ ಅಭಿಷೇಕ , ಶತರುದ್ರಾಭಿಷೇಕಗಳ ಮೂಲಕ ಮಳೆಗಾಗಿ ಪ್ರಾಥ೯ನೆಯನ್ನು ಸಲ್ಲಿಸಲಾಯಿತು. ಈ ಸಂದಭ೯ದಲ್ಲಿ ದೇವಾಲಯದ ಅಚ೯ಕರು, ಕಾಯ೯ನಿವ೯ಹಣಾಧಿಕಾರಿ, ಸಿಬ್ಬಂದಿ ವಗ೯ ದವರು ಉಪಸ್ಥಿತರಿದ್ದರು.
ಆಗಸ್ಟ್ 2 ರಂದು ಪರ್ಜನ್ಯ ಕಲಶಾಭಿಷೇಕ ನಡೆಯಲಿದೆ.
Click this button or press Ctrl+G to toggle between Kannada and English