ರೌಡಿಗಳನ್ನು ಸತ್ಪ್ರಜೆಗಳನ್ನಾಗಿ ಮಾಡಲು ವಿಶೇಷ ಪ್ಯಾಕೇಜ್

4:13 PM, Wednesday, August 28th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

rowdy-sheeterಮಂಗಳೂರು : ರೌಡಿಶೀಟರ್’ಗಳ ಪ್ರತಿ ಚಲನವಲನದ ಮೇಲೂ ಪೊಲೀಸರ ಹದ್ದಿನ‌ ಕಣ್ಣಿರುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಹರ್ಷ ಹೇಳಿದ್ದಾರೆ.

ನಗರದಲ್ಲಿ ಕಳ್ಳತನ, ಗಾಂಜಾ ಸಾಗಾಟ, ಕೊಲೆಯತ್ನ ಸೇರಿದಂತೆ ಬೇರೆ ಬೇರೆ ರೀತಿಯ ಅಪರಾಧ ಪ್ರಕರಣಗಳಲ್ಲಿ ತೊಡಗಿಸಿಕೊಂಡಿರುವ ರೌಡಿಶೀಟರ್’ಗಳನ್ನು ಉತ್ತಮ ಪ್ರಜೆಗಳಾಗಿ ಮಾಡಲು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಪಿ.ಆರ್. ಹರ್ಷ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ. 350ಕ್ಕೂ ಹೆಚ್ಚು ರೌಡಿಶೀಟರ್’ಗಳ ಪರೇಡ್ ನಡೆಸಿದ ಪೊಲೀಸ್ ಆಯುಕ್ತರು, ನಗರದಲ್ಲಿ ರೌಡಿಶೀಟರ್’ಗಳ ಪ್ರತಿ ಚಲನವಲನದ ಮೇಲೂ ಪೊಲೀಸರ ಹದ್ದಿನ‌ ಕಣ್ಣಿರುತ್ತದೆ ಎಂದು ಎಚ್ಚರಿಸಿದ್ದಾರೆ.

‘ಮೈ ಬೀಟ್ ಮೈ ಪ್ರೌಡ್’ ಕಾರ್ಯ ಕ್ರಮದಡಿ ನಗರದ ಎಲ್ಲ ಕಡೆ ನಡೆಯುವ ಘಟನೆಗಳು, ಕಾರ್ಯ ಚಟುವಟಿಕೆಗಳ ಮೇಲೆ ಗಮನಹರಿಸಲಾಗಿದೆ. ಈಗಾಗಲೇ ನ್ಯಾಯಾಲಯಗಳಲ್ಲಿರುವ ಕೇಸುಗಳ ವಿಚಾರಣೆಗೆ ಹಾಜರಾಗಿ ಹೊರಬರಬೇಕು. ಒಳ್ಳೆಯ ನಾಗರಿಕರಾಗಿ ಬದುಕಲು ಒಪ್ಪಿದರೆ ಅದಕ್ಕೆ ಪೊಲೀಸ್ ಇಲಾಖೆ ಸರ್ವ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.

ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡವರು ಇಂದಿನಿಂದಲೇ ಉತ್ತಮ ಪ್ರಜೆಗಳಾಗಿ ಸಮಾಜದಲ್ಲಿ ಬದುಕಬೇಕು. ಸರಕಾರ ನೀಡಿರುವ ಹಲವು ಯೋಜನೆಗಳನ್ನು ಉಪಯೋಗಿಸಿಕೊಂಡು ಸ್ವಯಂ ಉದ್ಯೋಗ ಮಾಡಿಕೊಂಡು ಜೀವನ ನಡೆಸಬಹುದು ಎಂದು ಹೇಳಿದರು.

ಇದೇ ವೇಳೆ, ಎನ್’ಜಿಒಗಳು ಸೇರಿದಂತೆ ಹಲವು ಸಂಘ ಸಂಸ್ಥೆಗಳು ಉದ್ಯೋಗಾವಕಾಶ ನೀಡಲು ಮುಂದಾಗಿವೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

 

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English