ನವದೆಹಲಿ : ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ರಾಷ್ಟ್ರಾದ್ಯಂತ ಫಿಟ್ ಇಂಡಿಯಾ ಆಂದೋಲನಕ್ಕೆ ಇಂದಿರಾ ಗಾಂಧಿ ಸ್ಟೇಡಿಯಂ ಕಾಂಪ್ಲೆಕ್ಸ್ ನಲ್ಲಿ ಚಾಲನೆ ನೀಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಮೊದಲ ಅವಧಿಯಲ್ಲಿ ಸ್ವಚ್ಛ ಭಾರತ ಅಭಿಯಾನಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಅದರಂತೆ ಈ ಬಾರಿ ಫಿಟ್ ಇಂಡಿಯಾ ಆಂದೋಲನಕ್ಕೆ ಕರೆ ನೀಡಿದ್ದಾರೆ. ದೇಶಾದ್ಯಂತ ಎಲ್ಲ ರಾಜ್ಯಗಳು ಇದರಲ್ಲಿ ಪಾಲ್ಗೊಳ್ಳಲಿದೆ. ಜೊತೆಗೆ ಈ ಆಂದೋಲನವನ್ನು ಯಶಸ್ವಿಗೊಳಿಸುವಂತೆ ಎಲ್ಲಾ ಶಾಲಾ ಕಾಲೇಜು, ಯುನಿವರ್ಸಿಟಿಗಳಿಗೆ ಸೂಚಿಸಲಾಗಿದೆ. ಈ ಆಂದೋಲನದ ಅಡಿಯಲ್ಲಿ ದೇಶಾದ್ಯಂತ 9 ತಿಂಗಳು ವಿವಿಧ ದೈಹಿಕ ಕಸರತ್ತು ಬಲವರ್ಧನೆ ಚಟುವಟಿಕೆಗಳು ನಡೆಯಲಿವೆವೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ವಾಕಥಾನ್, ಸೈಕಲ್ ರ್‍ಯಾಲಿ, ಹೆಲ್ತ್ ಚೆಕ್ ಅಪ್ ನಡೆಯಲಿದೆ. ಈ ಒಂದು ಅಭಿಯನವು ಶಾಲೆಯಿಂದ ವಿವಿಗಳವರೆಗೆ, ಗ್ರಾಮದಿಂದ ನಗರಗಳವರೆಗೆ ಕ್ರೀಡಾ ಕ್ರಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕ್ರೀಡಾ ಹಾಗೂ ಯುವಜನ ಖಾತೆ ಸಚಿವ ಕಿರಣ್ ರಿಜಿಜು, ಫಿಟ್ ಇಂಡಿಯಾ ಮೂಮೆಂಟ್ ನಲ್ಲಿ ಭಾಗವಹಿಸಲು ಸಮಾಜದ ಎಲ್ಲಾ ವರ್ಗಗಳಿಂದ ಅಪಾರ ಬೆಂಬಲ ಸಿಗುತ್ತಿದೆ ಎಂದು ಹೇಳಿದ್ದಾರೆ. ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಆ.29 ರಂದು ಪ್ರಧಾನಿ ಮೋದಿ ಫಿಟ್ ಇಂಡಿಯಾ ಚಳುವಳಿಗೆ ಚಾಲನೆ ನೀಡಲಿದ್ದಾರೆ. ರಾಷ್ಟ್ರವ್ಯಾಪಿ ಆಗುವ ಈ ಆಂದೋಲನವು ನಾಗರಿಕರ ದೈನಂದಿನ ಜೀವನದಲ್ಲಿ ದೈಹಿಕ ಚಟುವಟಿಕೆಗಳು ಮತ್ತು ಕ್ರೀಡೆಗಳನ್ನು ಒಳಗೊಂಡಿರುತ್ತದೆ. ಇದರಿಂದ ಅವರ ದೈಹಿಕ ಸಾಮರ್ಥ್ಯ ಮತ್ತು ಯೋಗಕ್ಷೇಮವನ್ನು ಸುಧಾರಿಸಬಹುದು ಎಂಬುದು ಈ ಚಳುವಳಿಯ ಉದ್ದೇಶವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಆ.29 ರಂದು ರಾಷ್ಟ್ರಾದ್ಯಂತ ಫಿಟ್ ಇಂಡಿಯಾ ಚಳುವಳಿಗೆ ಪ್ರಾರಂಭಿಸುವ ಸಲುವಾಗಿ ಈಗಾಗಲೇ ಸರ್ಕಾರಕ್ಕೆ ಸಲಹೆ ನೀಡಲು ಸಮಿತಿ ರಚಿಸಲಾಗಿದ್ದು, ಈ ಸಮಿತಿಯಲ್ಲಿ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ), ರಾಷ್ಟ್ರೀಯ ಕ್ರೀಡಾ ಸಂಘ (ಎನ್‌ಎಸ್‌ಎಫ್), ಸರ್ಕಾರಿ ಅಧಿಕಾರಿಗಳು, ಖಾಸಗಿ ಸಂಸ್ಥೆಗಳು ಮತ್ತು ಹೆಸರಾಂತ ಫಿಟ್‌ನೆಸ್ ವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದೆ. ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಾದ ಸರ್ಕಾರ, ಕ್ರೀಡಾ ಪ್ರಾಧಿಕಾರ (ಎಸ್‌ಎಐ), ಐಒಎ, ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ, ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ ಮತ್ತು ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಸದಸ್ಯರು ಕೂಡ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.
Click this button or press Ctrl+G to toggle between Kannada and English