ನವದೆಹಲಿ : ಪಿ.ಚಿದಂಬರಂ ಸೆಪ್ಟೆಂಬರ್ 2 ರವರೆ ಸಿಬಿಐ ವಶದಲ್ಲಿ

5:32 PM, Friday, August 30th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

chidambaramನವದೆಹಲಿ : ಐಎನ್‌ಎಕ್ಸ್‌ ಮೀಡಿಯಾ ಹಗರಣ ಪ್ರಕರಣದಲ್ಲಿ ಸಿಬಿಐ ವಶದಲ್ಲಿರುವ ಪಿ.ಚಿದಂಬರಂ ಅವರು ಸೆಪ್ಟೆಂಬರ್ 2 ರವರೆಗೂ ಸಿಬಿಐ ವಶದಲ್ಲಿಯೇ ಇರಲಿದ್ದಾರೆ.

ಚಿದಂಬರಂ ಅವರನ್ನು ಆಗಸ್ಟ್ 30 ರವರೆಗೆ ಸಿಬಿಐ ವಶಕ್ಕೆ ನೀಡಿ ಆದೇಶ ನೀಡಲಾಗಿತ್ತು.
ಇಂದು ಮತ್ತೆ ಅರ್ಜಿ ಸಲ್ಲಿಸಿದ ಸಿಬಿಐ ಮತ್ತೆ ಐದು ದಿನಗಳ ಕಾಲ ಸಿಬಿಐಗೆ ವಶಕ್ಕೆ ನೀಡುವಂತೆ ಕೇಳಿತ್ತು. ಆದರೆ ಇದಕ್ಕೆ ನಿರಾಕರಿಸಿರುವ ನ್ಯಾಯಾಲಯವು ಸೆಪ್ಟೆಂಬ್ ಎರಡರ ವರೆಗೆ ಮಾತ್ರವೇ ಚಿದಂಬರಂ ಅವರನ್ನು ಸಿಬಿಐ ವಶಕ್ಕೆ ನೀಡಿದೆ.

ಸೆಪ್ಟೆಂಬರ್ 5 ವರೆಗೆ ತಮ್ಮ ವಶಕ್ಕೆ ನೀಡುವಂತೆ ಸಿಬಿಐ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯವು ತಳ್ಳಿ ಹಾಕಿದೆ. ಈಗಾಗಲೇ 10 ದಿನಗಳ ಕಾಲ ಚಿದಂಬರಂ ಸಿಬಿಐ ವಶದಲ್ಲಿಯೇ ಇದ್ದರು. ಹಾಗಾಗಿ ಇನ್ನೂ ಹೆಚ್ಚಿನ ಕಾಲ ಸಿಬಿಐ ವಶಕ್ಕೆ ಬೇಡವೆಂದು ನ್ಯಾಯಾಲಯವು ಯೋಚಿಸಿದೆ.

ಆಗಸ್ಟ್ 21 ರಂದು ಸಿಬಿಐ ಅಧಿಕಾರಿಗಳು ಪಿ.ಚಿದಂಬರಂ ಅವರನ್ನು ಬಂಧಿಸಿದ್ದರು. ಐಎನ್‌ಎಕ್ಸ್‌ ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ ಈ ಬಂಧನವು ನಡೆದಿತ್ತು.

ಚಿದಂಬರಂ ಅವರನ್ನು ತಮ್ಮ ವಶಕ್ಕೆ ನೀಡಬೇಕೆಂದು ಕೋರಿತ್ತು. ಆದರೆ ನ್ಯಾಯಾಲಯವು ಇಡಿ ವಶದಿಂದ ಚಿದಂಬರಂ ಅವರಿಗೆ ಸೆಪ್ಟೆಂಬರ್ ಐದರ ವರೆಗೆ ಮಧ್ಯಂತರ ರಕ್ಷಣೆ ನೀಡಿದೆ.

 

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English