ಬೆಳ್ತಂಗಡಿ: ಉಜಿರೆ ಎಸ್‌ಡಿಎಂ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯನ್ನು ಧರ್ಮಸ್ಥಳದ ನಿರ್ಜನ ಪ್ರದೇಶದ ಕಾಡಿನಲ್ಲಿ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಧರ್ಮಸ್ಥಳದ ಪಾಂಗಾಳ ಮನೆ ಚಂದಪ್ಪ ಗೌಡರ ಪುತ್ರಿ ಸೌಜನ್ಯ (17) ಮೃತ ಯುವತಿಯಾಗಿದ್ದು ಕಾಲೇಜು ಬಿಟ್ಟು ಮನೆಗೆ ಬರುವ ವೇಳೆಗೆ ಈ ಕೃತ್ಯ ನಡೆಸಿರಬೇಕೆಂದು ಶಂಕಿಸಲಾಗಿದೆ.
ಮಂಗಳವಾರ ಕಾಲೇಜಿಗೆ ತೆರಳಿದ್ದ ಸೌಜನ್ಯ ಸಂಜೆ ಎಂದಿನಂತೆ ಮನೆಗೆ ಬಂದಿರಲಿಲ್ಲ. ಎಂದಿನಂತೆ ಹೊತ್ತು ಕಳೆದರೂ ಮನೆಗೆ ಬಾರದಿದ್ದುದರಿಂದ ಮನೆಯವರು ಹುಡುಕಾಟ ಆರಂಭಿಸಿದರು. ರಾತ್ರಿ 10. ಗಂಟೆ ಕಳೆದರೂ ಮಗಳು ಮನೆಗೆ ಬಾರದೇ ಇದ್ದುದರಿಂದ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಬುಧವಾರ ಬೆಳಗ್ಗೆಯೂ ಹುಡುಕಾಟ ಮುಂದುವರಿದು ಮಧ್ಯಾಹ್ನದ ವೇಳೆಗೆ ರಸ್ತೆ ಬದಿಯಲ್ಲಿಯೇ ಇರುವ ಕಾಡಿನಲ್ಲಿ ಮೃತದೇಹ ಪತ್ತೆಯಾಯಿತು. ಮುಖ್ಯ ರಸ್ತೆಯಿಂದ ಬಲ ತಿರುವು ಮೂಲಕ ಪಾಂಗಾಳಕ್ಕೆ ಹೋಗುವ ರಸ್ತೆ ಬದಿಯ ಕಾಡಿನಲ್ಲಿ ಶವ ಸಿಕ್ಕಿತ್ತು. ಸಂಜೆ ವೇಳೆಗೆ ಕಾಲೇಜಿನಿಂದ ಬರುವಾಗ ಹಿಂಬಾಲಿಸಿ ಬಂದು ಕಾಡಿಗೆ ಕರೆದೊಯ್ದು ಬಲಾತ್ಕಾರ ಮಾಡಿ ಕೊಲೆಗೈದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಸೌಜನ್ಯ ಕಾಲೇಜಿನ ಸಮವಸ್ತ್ರದಲ್ಲಿಯೇ ಇದ್ದಳು. ಕೊಲೆ ಮಾವಿದಾತ ಕಾಡಿಗೆ ಕರೆದೊಯ್ದು ಬಲಾತ್ಕಾರ ಮಾಡಿ ವಿವಸ್ತ್ರಗೊಳಿಸಿದ್ದಾನೆ. ಕೈಗಳನ್ನು ಚೂಡಿದಾರದ ಶಾಲಿನಿಂದ ಗಿಡಕ್ಕೆ ಕಟ್ಟಿ ಹಾಕಲಾಗಿತ್ತು. ಆಕೆ ಧರಿಸಿದ ಬಟ್ಟೆಯನ್ನು ಹರಿದು ಚಿಂದಿ ಮಾಡಲಾಗಿತ್ತು. ಬಳಿಕ ಅತ್ಯಾಚಾರಗೈದು ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಆಕೆ ಈ ಸಂದರ್ಭ ಪ್ರತಿರೋದ ತೋರಿಸಿದ್ದು ಘಟನಾ ಸ್ಥಳದಲ್ಲಿ ಕೆಸರು ಮೆತ್ತಿದ ಕಾಲುಗಳು, ಚಲ್ಲಾಪಿಲ್ಲಿಯಾದ ಬ್ಯಾಗು, ಸಾಕ್ಷಿಯಂತಿತ್ತು. ಆಕೆ ಧರಿಸಿದ್ದ ಚಿನ್ನದ ಚೈನು ಹಾಗೂ ಕಿವಿಯ ಆಭರಣ ಮೃತದೇಹದ ಮೇಲೆ ಹಾಗೆಯೇ ಇತ್ತು. ಆದ್ದರಿಂದ ಇದು ಆಭರಣಕ್ಕಾಗಿ ನಡೆದ ಕೃತ್ಯವಲ್ಲ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ
ಚಂದಪ್ಪ ಗೌಡರು ಲೋಕೋಪಯೋಗಿ ಇಲಾಖಾ ಗುತ್ತಿಗೆದಾರರಾಗಿದ್ದು ನಾಲ್ವರು ಪುತ್ರಿಯರು, ಒಬ್ಬ ಪುತ್ರನನ್ನು ಹೊಂದಿದ್ದಾರೆ. ದೊಡ್ಡ ಮಗಳಿಗೆ ಮದುವೆಯಾಗಿದ್ದು ಎರಡನೇ ಪುತ್ರಿ ಕೊಲೆಯಾದ ಈ ನತದೃಷ್ಟ ಬಾಲಕಿಯಾಗಿದ್ದಾಳೆ.
ಘಟನಾ ಸ್ಥಳಕ್ಕೆ ಎಸ್‌ಪಿ ಅಭಿಷೇಕ್ ಗೋಯೆಲ್, ಪುತ್ತೂರು ಇನ್ಸ್‌ಪೆಕ್ಟರ್ ಸುದರ್ಶನ್, ಬೆಳ್ತಂಗಡಿ ಎಸ್‌ಐ ಯೋಗೀಶ್ ಕುಮಾರ್ ಆಗಮಿಸಿದ್ದಾರೆ. ಶ್ವಾನದಳ ಆಗಮಿಸಿದೆ.
Click this button or press Ctrl+G to toggle between Kannada and English