ಹೊಸದಿಲ್ಲಿ : ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕೇಂದ್ರದ ಮಾಜಿ ಗೃಹಸಚಿವ ಪಿ.ಚಿದಂಬರಂ ಅವರನ್ನು ಸೆ.5ರವರೆಗೆ ಸಿಬಿಐ ಕಸ್ಟಡಿಗೆ ಒಪ್ಪಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಅಲ್ಲದೇ ಬಂಧನ ವಾರೆಂಟ್ ಕುರಿತಾದ ಅರ್ಜಿಯನ್ನು ಅದೇ ದಿನ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿದೆ.
ಸುಪ್ರೀಂ ಕೋರ್ಟ್ ನ್ಯಾ| ಆರ್ ಭಾನುಮತಿ ಮತ್ತು ಎ.ಎಸ್. ಬೋಪಣ್ಣ ಅವರಿದ್ದ ನ್ಯಾಯಪೀಠ ಚಿದಂಬರಂ ಅವರ ವಿರುದ್ಧ ಹೊರಡಿಸಲಾಗಿದ್ದ ಜಾಮೀನು ರಹಿತ ವಾರಂಟ್ ಮತ್ತು ಸಿಬಿಐ ಕಸ್ಟಡಿಗೆ ನೀಡಿದ್ದರ ವಿರುದ್ಧ ಸಲ್ಲಿಸಿದ್ದ ಅರ್ಜಿಯ ಕುರಿತ ವಿಚಾರಣೆಯನ್ನು ಕೈಗೆತ್ತಿಕೊಂಡಿತು.
ಈ ವೇಳೆ ನ್ಯಾಯಾಲಯ ಕೆಳಕೋರ್ಟ್‌ನ ಅಧಿಕಾರ ವ್ಯಾಪ್ತಿಗೆ ಅಡ್ಡ ಬರುವುದಿಲ್ಲ. ಆದ್ದರಿಂದ ಸದ್ಯಕ್ಕೆ ಜಾಮೀನು ಅರ್ಜಿಯನ್ನು ಮತ್ತೆ ಇಲ್ಲಿ ಸಲ್ಲಿಸದೆ, ಕೆಳಕೋರ್ಟ್‌ನಲ್ಲೇ ಸಲ್ಲಿಸುವಂತೆ ಚಿದಂಬರಂ ಅವರ ವಕೀಲರಿಗೆ ಹೇಳಿತು.
ಅಲ್ಲದೇ ಒಂದು ದಿನದ ಮಟ್ಟಿಗೆ ಅವರನ್ನು ತಿಹಾರ್ ಜೈಲಿಗೆ ವರ್ಗಾಯಿಸಲುದ್ದೇಶಿಸಿದ ಸಿಬಿಐ ಉದ್ದೇಶವನ್ನು ಸುಪ್ರೀಂ ಕೋರ್ಟ್ ತಡೆದಿದ್ದು, ಕಸ್ಟಡಿಯಲ್ಲೇ ಇಡುವಂತೆ ಹೇಳಿತು. ಇದೇ ವೇಳೆ ಸಿಬಿಐ ಚಿದು ಅವರನ್ನು ಯಾವುದೇ ವಿಚಾರಣೆ ನಡೆಸಬೇಕಾದ ಅಗತ್ಯವಿಲ್ಲ ಎಂದರೂ ಕಸ್ಟಡಿಯಲ್ಲೇ ಇಡುವಂತೆ ಸುಪ್ರೀಂ ಸೂಚಿಸಿತು.
Click this button or press Ctrl+G to toggle between Kannada and English