ಉಡುಪಿ ತಾ.ಪಂ.ಚುನಾವಣೆ ಗೌರಿಪೂಜಾರಿ ನೂತನ ಅಧ್ಯಕ್ಶೆಯಾಗಿ ಆಯ್ಕೆ

2:25 PM, Thursday, October 11th, 2012
Share
1 Star2 Stars3 Stars4 Stars5 Stars
(5 rating, 4 votes)
Loading...
Udupi Taluk Panchayat President

ಉಡುಪಿಃ ಬುಧವಾರ ನಡೆದ ಉಡುಪಿ ತಾಲ್ಲೂಕು ಪಂಚಾಯತ್ ಅಧ್ಯ ಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಯಲ್ಲಿ ಬಿಜೆಪಿ ಗೌರಿಪೂಜಾರಿ ಅಧ್ಯಕ್ಷ್ಯೆಯಾಗಿ, ರಾಮ ಕುಲಾಲ್ ಉಪಾಧ್ಯಕ್ಶರಾಗಿ ಆಯ್ಕೆಯಾದರು. ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ನಾಮಪಪತ್ರ ಸಲ್ಲಿಸಿದ್ದು ಕಾಂಗ್ರೆಸ್ ನಿಂದ ಸ್ಪರ್ಧಿಸಿದ ಅಭ್ಯರ್ಥಿ ಡಾ. ಸುನೀತ ಶೆಟ್ಟಿ ಯವರು 18 ಮತಗಳನ್ನು ಗಳಿಸಿದರೆ ಬಿಜೆಪಿ ಅಭ್ಯರ್ಥಿ ಗೌರಿಪೂಜಾರಿ ಯವರು 23 ಮತಗಳನ್ನು ಗಳಿಸಿ ಒಟ್ಟು 5 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಬಿಜೆಪಿಯಿಂದ ಸ್ಪರ್ಧಿಸಿದ ರಾಮ ಕುಲಾಲ್ ಅವರು ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ನಾಯ್ಕ ಅವರಿಗಿಂತ ಹೆಚ್ಚುಮತಗಳನ್ನು ಪಡೆಯುವುದರ ಮೂಲಕ ಉಪಾಧ್ಯಕ್ಷರಾಗಿ ಆಯ್ಕೆ ಯಾದರು.

ದ್ವಿತೀಯ ಪಿಯುಸಿ ಕಲಿತಿರುವ ಗೌರಿ ಪೂಜಾರಿ ಇವರ ಪತಿ ವಿಶ್ವನಾಥ ಕೋಟ್ಯಾನ್. ಉಪಾಧ್ಯಕ್ಷರಾಗಿ ಆಯ್ಕೆಯಾದ ರಾಮ ಕುಲಾಲ್ ಮೊದಲು ಎರಡು ಬಾರಿ ಪೆರ್ಡೂರು ಗ್ರಾ.ಪಂ.ಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾದವರು. ಗೌರಿ ಅವರು ಬಾರಕೂರು ತಾ.ಪಂ. ಕ್ಷೇತ್ರದ ಪ್ರತಿನಿಧಿ. ರಾಮ ಕುಲಾಲ್‌ ಪೆರ್ಡೂರು ಕ್ಷೇತ್ರದ ಪ್ರತಿನಿಧಿ.

ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ಪಂಚಾಯತ್ ಅದ್ಯಕ್ಷೆ ಗೌರಿಪೂಜಾರಿ ಯವರು ತಮ್ಮ ಗೆಲುವಿಗೆ ಮಾಜಿ ಶಾಸಕ ಹಾಲಾಡಿ ಶೆಟ್ಟಿ ಯವರು ಕಾರಣ ಎಂದು ಸ್ಮರಿಸಿದರು. ಶಾಸಕರಾದ ಲಾಲಾಜಿ ಮೆಂಡನ್, ರಘುಪತಿ ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ಉದಯಕುಮಾರ್ ಶೆಟ್ಟಿ, ಯುವಮೋರ್ಛಾ ಜಿಲ್ಲಾಧ್ಯಕ್ಷೆ ರೇಷ್ಮಾ ಉದಯ ಶೆಟ್ಟಿ, ನಿರ್ಗಮನ ಅಧ್ಯಕ್ಷ ದೇವದಾಸ ಹೆಬ್ಬಾರ್, ಸ್ಥಾಯೀ ಸಮಿತಿ ಅಧ್ಯಕ್ಷ ಭರತ್‌ಕುಮಾರ್‌ ಶೆಟ್ಟಿ, ತಾ.ಪಂ.ನ ಬಿಜೆಪಿ ಸದಸ್ಯರ ಸಹಿತ ಹಲವರು ಈ ಸಂದರ್ಭ ದಲ್ಲಿ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English