ಮಂಗಳೂರು : ಹೊಸ ಟ್ರಾಫಿಕ್ ನಿಯಮ ಪಾಲನೆಗೆ ಡಾ.ಪಿ ಎಸ್ ಹರ್ಷ ಸೂಚನೆ

12:07 PM, Friday, September 6th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

traficಮಂಗಳೂರು : ಕೆಲ ದಿನಗಳ ಹಿಂದೆ ಕೇಂದ್ರ ಸಚಿವ ಸಂಪುಟದ ಅನುಮೋದನೆ ಸಿಕ್ಕಿದ ಬೆನ್ನಲೇ ಕರ್ನಾಟಕ ಮೋಟಾರ್ ವಾಹನ ಕಾಯ್ದೆಯಲ್ಲೂ ತಿದ್ದುಪಡಿ ಮಾಡಿ ಜಾರಿ ಮಾಡಲಾಗಿತ್ತು. ಇದೀಗ ಸೆ.3ರಿಂದಲೇ ಹೊಸ ನಿಯಮ ಜಾರಿಗೊಳಿಸಿ ರಾಜ್ಯ ಸರ್ಕಾರದ ಆದೇಶ ಹೊರಡಿಸಿರುವ ಬಗ್ಗೆ ನಗರ ಪೊಲೀಸ್ ಆಯುಕ್ತ ಡಾ. ಪಿ ಎಸ್ ಹರ್ಷ ಪ್ರತಿಕ್ರಿಯಿಸಿದ್ದಾರೆ. ತಕ್ಷಣದಿಂದ ಜಾರಿಗೆ ಬರುವಂತೆ ನಿಯಮ ಜಾರಿಯನ್ನು ಮಂಗಳೂರು ಕಮಿಷನರೇಟ್ ವತಿಯಿಂದ ಕ್ರಮ ಕೈಗೊಳ್ಳಲಾಗಿದ್ದು, ಈ ಸಂಬಂಧ ಪೊಲೀಸರೊಂದಿಗೆ ಸಹಕರಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ನೂತನ ಸಂಚಾರಿ ನಿಯಮಾನುಸಾರ ಈಗಾಗಲೇ ಪರಿಷ್ಕೃತ ದಂಡ ವಿಧಿಸಲು ಪೊಲೀಸರು ಸಜ್ಜಾಗಿದ್ದು, ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಭಾರಿ ಮೊತ್ತದ ದಂಡ ಬೀಳಲಿದೆ. ಟ್ರಾಫಿಕ್ ನಿಯಮ ಉಲ್ಲಂಘನೆ ಕುರಿತ ಮೋಟಾರು ವಾಹನ ಕಾಯ್ದೆಯನ್ನು ಅಧಿಕೃತವಾಗಿ ರಾಜ್ಯ ಸರ್ಕಾರ ಜಾರಿ ಮಾಡಿದೆ. ಈಗಾಗಲೇ ಹೊಸ ಟ್ರಾಫಿಕ್ ರೂಲ್ಸ್ ಜಾರಿಗೆ ಬಂದಿದ್ದು, ವಾಹನ ಸವಾರರು ಎಚ್ಚರ ವಹಿಸಬೇಕಿದೆ. ಒಂದು ವೇಳೆ ಟ್ರಾಫಿಕ್ ನಿಯಮವನ್ನು ಪಾಲಿಸಲಿಲ್ಲ ಎಂದರೆ ಭಾರೀ ದಂಡ ಕಟ್ಟಲು ಸವಾರರು ಸಿದ್ಧವಾಗಿರಬೇಕು. ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವ ವಾಹನ ಸವಾರರ ಮೇಲೆ ಟ್ರಾಫಿಕ್ ಪೊಲೀಸರು ಕಣ್ಣಿಟ್ಟು ಇಂದಿನಿಂದ ಎಲ್ಲೆಡೆ ಫೈನ್ ಹಾಕಲಿದ್ದಾರೆ.

ನೂತನ ಕಾಯ್ದೆ ಪ್ರಕಾರ, ಆ್ಯಂಬುಲೆನ್ಸ್‌ ನಂತಹ ತುರ್ತು ವಾಹನಗಳಿಗೆ ದಾರಿ ಬಿಡದೇ ಇದ್ದರೆ 10,000 ರೂ. ದಂಡ ವಿಧಿಸಲು ಅವಕಾಶವಿದೆ. ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ರೂ. 500, ಲೈಸೆನ್ಸ್‌ ಇಲ್ಲದೆ ಚಾಲನೆ ಮಾಡಿದರೆ ರೂ. 5,000, ವಿಮೆ ಇಲ್ಲದಿದ್ದರೆ ರೂ. 2,000, ವೇಗದ ಚಾಲನೆಗೆ ರೂ. 2,000, ಸೀಟ್ ಬೆಲ್ಟ್‌ ಇಲ್ಲದಿದ್ದರೆ ರೂ. 1,000, ಹೆಲ್ಮೆಟ್‌ ರಹಿತ ಚಾಲನೆಗೆ ರೂ. 1,000, ಮದ್ಯಸೇವಿಸಿ ಚಾಲನೆಗೆ ರೂ. 10,000, ದ್ವಿಚಕ್ರವಾಹನದಲ್ಲಿ ಓವರ್‌ಲೋಡಿಂಗ್ (ಇಬ್ಬರಗಿಂತ ಹೆಚ್ಚು ಮಂದಿ ಪ್ರಯಾಣಿಸಿದರೆ) ಮಾಡಿದರೆ ರೂ. 2,000 ಈ ರೀತಿಯಾಗಿ ದಂಡ ವಿಧಿಸಲಾಗುತ್ತದೆ.

 

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English