ಉಡುಪಿ : ಡಿವೈಡರ್‌ಗೆ ನುಗ್ಗಿದ ಕಾರು : ಚಾಲಕ ಪ್ರಾಣಾಪಾಯದಿಂದ ಪಾರು

3:05 PM, Friday, September 6th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Udupi Udupi2ಉಡುಪಿ : ಕುಂದಾಪರ- ಉಡುಪಿ ರಾಷ್ಟ್ರೀಯ ಹೆದ್ದಾರಿಯ ಶಾರದಾ ಇಂಟರ್‌ ನ್ಯಾಷನಲ್‌ ಹೋಟೇಲ್‌ ಬಳಿ ಕಾರೊಂದು ರಸ್ತೆ ಡಿವೈಡರ್‌ ಗೆ ನುಗ್ಗಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

ಕಾರು ಚಾಲಕನನ್ನು ಕಲ್ಯಾಣಪುರದ ಆನಂದ್ ಪದ್ಮನಾಭನ್ ಎಂದು ಗುರುತಿಸಲಾಗಿದೆ. ಸಂತೇಕಟ್ಟೆಯಿಂದ ಉಡುಪಿಯ ಕಡೆಗೆ ಸಾಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದ್ದು, ಅಪಘಾತದ ತೀವ್ರತಗೆ ಕಾರು ಸಂಪೂರ್ಣ ಹಾನಿಯಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಚಾಲಕನನ್ನು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಡುಪಿ ಸಂಚಾರಿ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

 

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English