ಬೆಂಗಳೂರು : ತನ್ನ ಗುರಿ ತಲುಪುವ ಕೆಲವೇ ಕಿಲೋ ಮೀಟರ್ ಅಂತರದಲ್ಲಿ ಚಂದ್ರಯಾನ- 2 ನೌಕೆ ಸಂವಹನ ಕಳೆದುಕೊಳ್ಳುತ್ತಿದ್ದಂತೆಯೇ ಬೆಂಗಳೂರಿನ ಇಸ್ರೋದ ಕಂಟ್ರೋಲ್ ಸೆಂಟರ್ ನಲ್ಲಿ ದುಗುಡ ಮನೆ ಮಾಡಿತ್ತು.
ಈ ಹೆಮ್ಮೆಯ ಕ್ಷಣಕ್ಕಾಗಿ ಉಸಿರುಬಿಗುಹಿಡಿದು ಕಾದಿದ್ದ ಭಾರತೀಯರ ಮನಸ್ಸಿನಲ್ಲೂ ಬೇಸರ ಮನೆ ಮಾಡಿತ್ತು. ಆದರೆ ಎಲ್ಲಕ್ಕಿಂತ ಭಾವುಕ ಅನಿಸಿದ ಕ್ಷಣವೆಂದರೆ ತಮ್ಮ ಕನಸಿನ ಕೂಸು ಚಂದ್ರಯಾನ 2 ಕೊನೆಯ ಕ್ಷಣದಲ್ಲಿ ಕಂಡ ಅನಿರೀಕ್ಷಿತ ತಿರುವನ್ನು ನೆನೆದು ಇಸ್ರೋ ಅಧ್ಯಕ್ಷ ಕೆ. ಶಿವನ್ ಕಣ್ಣೀರಿಟ್ಟಿದ್ದಾರೆ.
ಇಸ್ರೋ ಕಂಟ್ರೋಲ್ ಸೆಂಟರ್ ನಲ್ಲಿ ಭಾಷಣ ಮುಗಿಸಿ ಹೊರಟ ಮೋದಿಯವರನ್ನು ಬೀಳ್ಕೊಡಲು ಬಂದ ಶಿವನ್, ಅದುವರೆಗೂ ಗಂಟಲೊಳಗೇ ಹುದುಗಿಸಿಕೊಂಡಿದ್ದ ದುಃಖವನ್ನು ಹೊರಹಾಕಿದರು. ಅವರ ನೋವನ್ನು ಅರ್ಥಮಾಡಿಕೊಂಡ ಪ್ರಧಾನಿ ಮೋದಿ, ರಕ್ಷಣವೇ ಅವರನ್ನು ತಬ್ಬಿ, ಬೆನ್ನುಸವರಿ, ಸಂತೈಸಿದರು. ಚಂದ್ರಯಾನ 2 ಶಿವನ್ ಅವರಿಗೆ ಒಂದು ಬಾಹ್ಯಾಕಾಶ ಯೋಜನೆಯಷ್ಟೇ ಆಗದೆ ತಮ್ಮ ಕುಟುಂಬದ ಕೂಸೇ ಆಗಿತ್ತು ಎಂಬುದಕ್ಕೆ ಈ ಕ್ಷಣ ಸಾಕ್ಷಿಯಾಯಿತು.
Click this button or press Ctrl+G to toggle between Kannada and English