ಮಂಜೇಶ್ವರ : ಮಂಜೇಶ್ವರ ಒಳಗಿನ ಪೇಟೆಯಲ್ಲಿ ಬೇಕರಿಯೊಂದು ಶಾರ್ಟ್ ಸೆಕ್ಯೂರ್ಟ್ ನಿಂದ ಉಂಟಾದ ಬೆಂಕಿಯಿಂದಾಗಿ ಸಂಪೂರ್ಣ ಬೆಂಕಿ ಗಾಹುತಿಯಾದ ಘಟನೆ ತಡರಾತ್ರಿ ನಡೆದಿದೆ.
ಸೋಮವಾರ ಬೆಳಗ್ಗೆ ಪತ್ರಿಕೆ ಹಾಕುತ್ತಿದ್ದ ವ್ಯಕ್ತಿ ಅಂಗಡಿಯೊಳಗಿಂದ ಹೊಗೆ ಬರುತ್ತಿರುವುದ್ದನ್ನು ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ಹಮೀದ್ ಮಾಲಕತ್ವದ ಅಲ್ಫಾ ಬೇಕರಿಯ ಸುಮಾರು ಮೂರು ಲಕ್ಷಕ್ಕೂ ಹೆಚ್ಚಿನ ಸಾಮಾಗ್ರಿಗಳು ಸಂಪೂರ್ಣ ಬೆಂಕಿಗಾಹುತಿಯಾಗಿದೆ.
ಉಪ್ಪಳದಿಂದ ತಲುಪಿದ ಅಗ್ನಿಶಾಮಕ ದಳ ಹಾಗೂ ಮಂಜೇಶ್ವರ ಪೊಲೀಸರು ಸ್ಥಳೀಯರು ಸೇರಿ ಬೆಂಕಿಯನ್ನು ನಂದಿಸಿದರು.
Click this button or press Ctrl+G to toggle between Kannada and English