ಉಡುಪಿ : “ನೀವು ಇಂದು ನರೇಂದ್ರ ಮೋದಿಯವರ ನಿಲುವನ್ನು ವಿರೋಧಿಸಿ ರಾಜೀನಾಮೆ ನೀಡಿದ್ದೀರಿ. ಮುಂದೆ ನೀವು ಆತ್ಮಹತ್ಯೆಯನ್ನೂ ಮಾಡಿಕೊಳ್ಳಬೇಕಾದೀತು. ಅಂತಹ ನಿಲುವನ್ನು ಭಾರತ ಸರಕಾರ ತೆಗೆದುಕೊಳ್ಳುತ್ತದೆ” ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರು ದ.ಕ. ಜಿಲ್ಲಾಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಸಿಕಾಂತ್ ಸೆಂಥಿಲ್ ಅವರಿಗೆ ಹೇಳಿದ್ದಾರೆ.
ಮಂಗಳವಾರ ಉಡುಪಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಜಗತ್ತು ಭಾರತದ ಆಡಳಿತವನ್ನು ಒಪ್ಪಿಕೊಳ್ಳುತ್ತಿರುವ ಸಂದರ್ಭದಲ್ಲಿ, ಯಾವುದೋ ಜಿಲ್ಲಾಧಿಕಾರಿ ಇದನ್ನು ವಿರೋಧಿಸಿ ರಾಜೀನಾಮೆಯನ್ನು ಕೊಡುತ್ತಾರೆ. ಭಾರತದ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಕೆಲಸವನ್ನು ಮೋದಿ ಸರಕಾರ ಮಾಡುತ್ತಿದೆ. ರಾಜೀನಾಮೆ ಕೊಟ್ಟಂತಹ ಜಿಲ್ಲಾಧಿಕಾರಿ ಪತ್ರಿಕೆಗಳಿಗೆ ಕಾಶ್ಮೀರದ ವಿಷಯದ ಕುರಿತಂತೆ, ರಾಮ ಮಂದಿರದ ವಿಷಯದ ಕುರಿತಂತೆ ನನಗೆ ಸಮಾಧಾನ ಆಗಿಲ್ಲ ಎಂದು ಹೇಳುತ್ತಾರೆ. ನಾನು ಜಿಲ್ಲಾಧಿಕಾರಿಯವರನ್ನು ಮತ್ತು ಆ ಮಾನಸಿಕತೆ ಇರುವವರಿಗೆ ಹೇಳುತ್ತೇನೆ. ಕೇವಲ 370ನೆ ವಿಧಿ ಅಲ್ಲ, ಪಿಒಕೆಗೆ ಪ್ರವೇಶ ಮಾಡುತ್ತೇವೆ. ಇವತ್ತು ಮೋದಿ ನಿಲುವನ್ನು ವಿರೋಧಿಸಿ ರಾಜೀನಾಮೆ ನೀಡಿದ್ದೀರಿ. ಮುಂದೆ ಆತ್ಮಹತ್ಯೆ ಮಾಡಿಕೊಳ್ಳಬೇಕಾದೀತು. ಅಂತಹ ನಿಲುವುಗಳನ್ನು ಕೇಂದ್ರ ಸರಕಾರ ಕೈಗೊಳ್ಳಲಿದೆ” ಎಂದು ಹೇಳಿದರು.
Click this button or press Ctrl+G to toggle between Kannada and English