ಉಳ್ಳಾಲ : ನಗರಸಭೆ ಅನ್ಯಾಯ ಭ್ರಷ್ಟಾಚಾರ ವಿರುದ್ದ : ಹಿತರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನೆ

4:50 PM, Wednesday, September 11th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Ullalಉಳ್ಳಾಲ : ಮಾಜಿ ಸಚಿವರ ಪ್ರೇರಣೆಯಿಂದ ಅಧಿಕಾರಿಗಳು ದುರಾಡಳಿತ ನಡೆಸುತ್ತಾ ಉಳ್ಳಾಲದಲ್ಲಿ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಕಲ್ಪಿಸದೇ, ಸೌಹಾರ್ದತೆಗೆ ಧಕ್ಕೆಯಾಗುವಂತೆ ಮಾಡುತ್ತಿದ್ದಾರೆ ಎಂದು ನಾಗರಿಕ ಹಿತರಕ್ಷಣಾ ಸಮಿತಿ ಉಳ್ಳಾಲ ಇದರ ಗೌರವಾಧ್ಯಕ್ಷ ದಿನಕರ್ ಉಳ್ಳಾಲ ಅಭಿಪ್ರಾಯಪಟ್ಟರು.

ನಾಗರಿಕ ಹಿತರಕ್ಷಣಾ ಸಮಿತಿ ಉಳ್ಳಾಲ ಇವರ ವತಿಯಿಂದ ಉಳ್ಳಾಲ ನಗರಸಭೆಯಲ್ಲಿ ನಡೆಯುವ ಅನ್ಯಾಯ ಹಾಗೂ ಭ್ರಷ್ಟಾಚಾರ ವಿರುದ್ದ ಉಳ್ಳಾಲ ಅಬ್ಬಕ್ಕ ವೃತ್ತದಿಂದ ಉಳ್ಳಾಲ ನಗರಸಭೆ ಕಚೇರಿವರೆಗೆ ನಡೆದ ಪ್ರತಿಭಟನಾ ಜಾಥಾ ಹಾಗೂ ನಗರಸಭೆ ಎದುರುಗಡೆ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಕ್ಷೇತ್ರದ ಶಾಸಕರು ತಮ್ಮ ಕ್ಷೇತ್ರದ ಅಭಿವೃದ್ಧಿಯನ್ನು ಬಿಟ್ಟು ದೇಶದ ಕುರಿತು ಮಾತನಾಡುತ್ತಾ ಮಾಧ್ಯಮಗಳಲ್ಲಿ ಪ್ರಚಾರ ಪಡೆಯುತ್ತಿದ್ದಾರೆ. ವಸತಿ ಹಾಗೂ ವಾಣಿಜ್ಯ ಸಂಕೀರ್ಣಗಳಿಗೆ ನಗರಸಭೆ ಯಿಂದ ಬೇಕಾಬಿಟ್ಟಿ ಅನುಮತಿ ನೀಡಿ ಅವರಿಗೆ ಒಳಚರಂಡಿ ಯೋಜನೆ ಕಲ್ಪಿಸದೆ ಉಳ್ಳಾಲದಲ್ಲಿ ಸಮುದಾಯಗಳ ನಡುವೆ ಅಶಾಂತಿಗೆ ಕಾರಣವಾಗುತ್ತಿದ್ದಾರೆ. ನಗರಸಭೆ ಆಡಳಿತ ಮೀಸಲಾತಿ ವಿಚಾರ ನ್ಯಾಯಾಲಯದಲ್ಲಿರುವುದರಿಂದ ಜನರು ಆಯ್ಕೆ ಮಾಡಿದ 37 ಕೌನ್ಸಿಲರುಗಳು ಕೆಲಸವಿಲ್ಲದಂತಾಗಿದ್ದಾರೆ. ವಾರ್ಡುಗಳ ಅಭಿವೃದ್ದಿಯ ಕುರಿತು ಸದಸ್ಯರುಗಳಿಗೆ ನಗರಸಭೆ ಅಧಿಕಾರಿ ಯಾವುದೇ ಸ್ಪಂಧನೆ ನೀಡುತ್ತಿಲ್ಲ. ಶಾಸಕರ ಪಕ್ಷದ ಓರ್ವ ಕೌನ್ಸಿಲರ್ ನೃತ್ಯ ಮಾಡುತ್ತಿದ್ದರೆಇದ್ದರೆ, ಮಹಿಳಾ ಕೌನ್ಸಿಲರ್ ಒಬ್ಬರೂ ಸಮುದ್ರದ ಉಪ್ಪು ನೀರಿನಲ್ಲಿ ದಿನನಿತ್ಯ ನಡೆದುಕೊಂಡೇ ಹೋಗುತ್ತಲೇ ಸಮಸ್ಯೆಗೆ ಪರಿಹಾರ ಸಿಗದಂತಾಗಿದ್ದಾರೆ. ನಗರಸಭೆ ಮೇಲ್ದರ್ಜೆಗೆ ಏರಿದ ಬಳಿಕ ರೂ.5ಕೋಟಿ ವಿಶೇಷ ಅನುದಾನ ಹಾಗೂ 14 ನೇ ಹಣಕಾಸು ಯೋಜನೆ ಬಂದರೂ ಸಮರ್ಪಕವಾಗಿ ಜಾರಿಯಾಗಿಲ್ಲ. ಕೇವಲ ರೂ.2,000 ದಾರಿದೀಪ ಹಾಕುವಲ್ಲಿಯೂ ನಗರಸಭೆ ಕಮೀಷನರ್‌ ಗೆ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಝಾಕಿರ್ ಹುಸೈನ್ ಮಾತನಾಡಿ, ಸ್ವಯಂಘೋಷಿತ ಆಸ್ತಿ ತೆರಿಗೆಯನ್ನು ರಾಜಕೀಯ ಪ್ರೇರಿತವಾಗಿ ಜಾರಿ ಮಾಡಲಾಗಿದೆ. ಸಂಗ್ರಹವಾದ ತೆರಿಗೆಯಲ್ಲಿ ಉಳ್ಳಾಲವನ್ನು ಮಾದರಿ ಪ್ರದೇಶವನ್ನು ರೂಪಿಸಬಹುದಿತ್ತು. ಅದು ಶಾಸಕರ ಹಾಗೂ ಅಧಿಕಾರಿಯ ಖಜಾನೆ ಸೇರುತ್ತಿದೆ. ಈ ವಿಚಾರವನ್ನು ಪ್ರತಿಭಟಿಸಿದಲ್ಲಿ ಅವರ ಮೇಲೆ ಕೇಸ್‌ ಹಾಕ ಜೈಲಿಗಟ್ಟುವ ಕೆಲಸವಾಗುತ್ತಿದೆ. ಆದರೆ ಇದೀಗ ಎಲ್ಲಾ ಸಮುದಾಯದವರು ಪ್ರತಿಭಟನೆಗೆ ಸಿದ್ಧರಾಗಿದ್ದಾರೆ. ಹೆದರಿಸಿದರೂ ಹೆದರುವವರು ಉಳ್ಳಾಲದ ಜನತೆಯಲ್ಲ ಎಂದು ಎಚ್ಚರಿಸಿದರು.

ಈ ಸಂದರ್ಭ ಗೌರವಾಧ್ಯಕ್ಷ ದಿನಕರ್ ಉಳ್ಳಾಲ್, ಅಧ್ಯಕ್ಷ ಯು.ಕೆ ಮಹಮ್ಮದ್ ಮುಸ್ತಾಫ, ಪ್ರಧಾನ ಕಾರ್ಯದರ್ಶಿ ಝಾಕಿರ್ ಉಳ್ಳಾಲ, ಮಾಜಿ ಅಧ್ಯಕ್ಷ ಯಶವಂತ ಅಮೀನ್, ಭಗವಾನ್ ದಾಸ್, ಮುಸ್ತಾಕ್ ಅಹಮ್ಮದ್ ಪಟ್ಲ, ಹಮೀದ್ ಉಳ್ಳಾಲ್, ನಮಿತಾ ಗಟ್ಟಿ, ಅಶ್ರಫ್ ಬಾವಾ ಕೋಡಿ, ಶಬೀರ್ ಕಾಸಿಂ, ಇಮ್ತಿಯಾಝ್ ಕೋಟೆಪುರ, ಕಬೀರ್ ಉಳ್ಳಾಲ ಮುಂತಾದವರು ಉಪಸ್ಥಿತರಿದ್ದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English