ಮಂಗಳೂರು : ಹದಗೆಟ್ಟಿರುವ ರಾಷ್ಟ್ರೀಯ/ರಾಜ್ಯ ಹೆದ್ದಾರಿಗಳು, ಘಾಟಿ ರಸ್ತೆಗಳು, ಲೋಕೋಪಯೋಗಿ ರಸ್ತೆಗಳು, ಜಿಲ್ಲಾ ಮುಖ್ಯ ರಸ್ತೆಗಳ ದುರಸ್ತಿಯನ್ನು ಅಕ್ಟೋಬರ್ ಅಂತ್ಯದೊಳಗೆ ಪೂರ್ಣಗೊಳಿ ಸುವಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸಂಸದ ನಳಿನ್ ಕುಮಾರ್ ಕಟೀಲು ಸೂಚಿಸಿದ್ದಾರೆ.
ಅವರು ದ.ಕ. ಜಿ.ಪಂ. ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಂತ್ರಿಕ ಅಥವಾ ಆರ್ಥಿಕ ನೆಪ ಹೇಳಿ ಕಾಮಗಾರಿ ವಿಳಂಬವಾಗಬಾರದು. ಕೇಂದ್ರ ಮಾತ್ರವಲ್ಲ ರಾಜ್ಯ ಸರಕಾರದಿಂದ ಹಣಕಾಸಿನ ನೆರವು ಅವಶ್ಯವಿದ್ದರೆ ಗಮನಕ್ಕೆ ತರಬೇಕು. ಅನುದಾನ ಒದಗಿಸಲಾಗುವುದು ಎಂದರು.
ಉತ್ತರಿಸಿದ ರಾ.ಹೆ. ಅಧಿಕಾರಿಗಳು, ಕುಲಶೇಖರ- ಮೂಡುಬಿದಿರೆ ರಸ್ತೆಯ 39 ಕಿ.ಮೀ. ಪೈಕಿ 13 ಕಿ.ಮೀ. ನಿರ್ವಹಣೆ ಕಾಮಗಾರಿ ಅನುಮೋದನೆಗೊಂಡಿದೆ. ಉಳಿದಂತೆ ರಸ್ತೆ ರಾ.ಹೆ. ಪ್ರಾಧಿಕಾರಕ್ಕೆ ಹಸ್ತಾಂತರಗೊಳ್ಳುವುದರಿಂದ ಕಾಮಗಾರಿಗೆ ಅನುದಾನ ಲಭ್ಯವಾಗುವುದಿಲ್ಲ. ಮಾಣಿ- ಸಂಪಾಜೆ ರಸ್ತೆಯಲ್ಲಿ ನಿರ್ವಹಣ ಕಾಮ ಗಾರಿಯ ಅಂದಾಜು ಪಟ್ಟಿ ಕಳುಹಿಸಲಾಗಿದೆ. ಬಿ.ಸಿ. ರೋಡ್-ಚಾರ್ಮಾಡಿ ರಸ್ತೆಯಲ್ಲೂ ರಸ್ತೆ ನಿರ್ವಹಣೆಗೆ ಅಂದಾಜು ಪಟ್ಟಿ ಸಿದ್ಧ ಪಡಿಸಲಾಗಿದೆ. ಎಲ್ಲ ರಸ್ತೆಗಳ ಕಾಮಗಾರಿ ಯನ್ನು ಮಳೆ ನಿಂತ ಕೂಡಲೇ ಕೈಗೆತ್ತಿಗೊಳ್ಳ ಲಾಗು ವುದು ಎಂದರು.
ಚಾರ್ಮಾಡಿಯಲ್ಲಿ 33 ಕಡೆ ಭೂಕುಸಿತ ವಾಗಿದ್ದು, ದುರಸ್ತಿ ನಡೆದಿದೆ. ಲಘು ವಾಹನ ಗಳ ಸಂಚಾರಕ್ಕೆ ಅವಕಾಶ ನೀಡಬಹುದು ಎಂದು ಹೆದ್ದಾರಿ ಇಲಾಖೆ ಶಿಫಾರಸು ಮಾಡಿದೆ. ಚಿಕ್ಕಮಗಳೂರು ಎಸ್‌ಪಿ ಇನ್ನೂ ಅನುಮತಿ ನೀಡಿಲ್ಲ ಎಂದರು.
ರಾ.ಹೆ. ಪ್ರಾಧಿಕಾರದ ಯೋಜನಾ ಉಪ ನಿರ್ದೇಶಕರು ಮಾತನಾಡಿ, ಬಿ.ಸಿ. ರೋಡ್ – ಸುರತ್ಕಲ್ ನಡುವಣ 34 ಕಿ.ಮೀ. ರಸ್ತೆಯಲ್ಲಿ ಗುಂಡಿ ಮುಚ್ಚುವುದು ಸೇರಿದಂತೆ ನಿರ್ವಹಣೆಗೆ 24 ಕೋ.ರೂ. ಮಂಜೂರಾಗಿದೆ. ಬಿ.ಸಿ. ರೋಡ್-ಅಡ್ಡಹೊಳೆ ಚತುಷ್ಪಥ ಕಾಮಗಾರಿಗೆ ಹೆಚ್ಚುವರಿ 47 ಎಕ್ರೆ ಭೂಸ್ವಾಧೀನ ಅಂತಿಮ ಹಂತದಲ್ಲಿದೆ. ಹೊಸ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಶೀಘ್ರದಲ್ಲೇ ಕಾಮಗಾರಿ ಮರು ಆರಂಭಗೊಳ್ಳಲಿದೆ ಎಂದರು.
ಕುಲಶೇಖರ- ಕಾರ್ಕಳ ರಾ.ಹೆ. ಮೇಲ್ದರ್ಜೆ ಯೋಜನೆಯಲ್ಲಿ ರಸ್ತೆ ಹಾದು ಹೋಗುವ 20 ಗ್ರಾಮಗಳ ಪೈಕಿ 18ರಲ್ಲಿ ಭೂಸ್ವಾಧೀನ ಅಂತಿಮ ಹಂತದಲ್ಲಿದೆ. 2 ಗ್ರಾಮಗಳಲ್ಲಿ ನ್ಯಾಯಾಲಯದಲ್ಲಿ ದಾವೆ ಇದೆ. ಹೆದ್ದಾರಿ 45 ಮೀ. ಅಗಲಗೊಳ್ಳಲಿದೆ ಎಂದು ಅಧಿಕಾರಿ ವಿವರಿಸಿದರು.
ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ಡಿಸೆಂಬರ್‌ಗೆ ಪೂರ್ಣಗೊಳ್ಳಲಿದೆ ಎಂದು ನವಯುಗ ಅಧಿಕಾರಿ ತಿಳಿಸಿದರು. ನವೆಂಬರ್‌ಗೆà ಮುಗಿಸುವ ಪ್ರಯತ್ನ ನಡೆಸಬೇಕು ಎಂದು ರಾ.ಹೆ. ಪ್ರಾಧಿಕಾರ- ಬೆಂಗಳೂರು ವಿಭಾಗದ ಮಹಾಪ್ರಬಂಧಕ ಸೂರ್ಯವಂಶಿ ಸೂಚನೆ ನೀಡಿದರು.
ಒಟ್ಟು 8,333 ಕಿ.ಮೀ. ಜಿ.ಪಂ. ರಸ್ತೆಗಳ ಪೈಕಿ 861 ಕಿ.ಮೀ. ಹಾನಿಯಾಗಿದ್ದು, 65 ಕೋ.ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿ.ಪಂ. ಗ್ರಾಮೀಣಾಭಿವೃದ್ಧಿ ಕಾ.ನಿ. ಎಂಜಿನಿಯರ್ ತಿಳಿಸಿದರು.
ಮಳೆಯಿಂದ 943 ಕೋ.ರೂ. ಹಾನಿ ಯಾಗಿದೆ. 1,226 ಎಕರೆ ಭತ್ತ ಮತ್ತು 1,362 ಎಕರೆ ತೋಟಗಾರಿಕೆ ಬೆಳೆ ನಾಶವಾಗಿವೆ. 949 ಮನೆಗಳಿಗೆ ಹಾನಿ ಯಾಗಿದೆ. 2,405 ಮಂದಿಗೆ ತಲಾ 10 ಸಾವಿರ ರೂ.ನಂತೆ ತಾತ್ಕಾಲಿಕ ಪರಿಹಾರ ವಿತರಿಸ ಲಾಗಿದೆ ಎಂದು ಎಡಿಸಿ ರೂಪಾ ವಿವರಿಸಿದರು.
948 ಡೆಂಗ್ಯೂ ಪ್ರಕರಣ ವರದಿ ಯಾಗಿವೆ. 11 ಮಂದಿ ಮೃತ ಪಟ್ಟಿದ್ದು, ಇಬ್ಬರು ಡೆಂಗ್ಯೂನಿಂದ ಮೃತಪಟ್ಟಿರುವುದು ಅಧಿಕೃತಗೊಂಡಿದ್ದು, 9 ಸಂಶಯಿತ ಪ್ರಕರಣ ಗಳು. 104 ಇಲಿ ಜ್ವರ ವರದಿಯಾಗಿವೆ ಎಂದು ಡಿಎಚ್‌ಒ ವಿವರಿಸಿ ದರು.
ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿ ಗೋಡು, ಸಿಇಒ ಡಾ| ಆರ್. ಸೆಲ್ವಮಣಿ, ಶಾಸಕ ಡಾ| ಭರತ್ ಶೆಟ್ಟಿ ಉಪಸ್ಥಿತರಿದ್ದರು.
ಪಚ್ಚನಾಡಿ ತ್ಯಾಜ್ಯ ರಾಶಿ ಕುಸಿತಕ್ಕೆ ಸಂಬಂಧಿಸಿ ಜಿಲ್ಲಾಡಳಿತ ಮತ್ತು ಮನಪಾ ಸಮರ್ಪಕ ಕ್ರಮ ಕೈಗೊಂಡಿಲ್ಲ. ಘಟನೆ ನಡೆದು ತಿಂಗಳು ಕಳೆದರೂ ಕಾರಣಗಳೇನು, ಯಾರಿಂದ ಲೋಪವಾಗಿದೆ ಎಂದು ತನಿಖೆ ನಡೆದಿಲ್ಲ ಎಂದು ಆಕ್ರೋಶಿಸಿದ ನಳಿನ್, ದೇಶ ಹಾಳಾಗಿದೆ ಎನ್ನುವ ನಿರ್ಗಮಿತ ಜಿಲ್ಲಾಧಿಕಾರಿಗೆ ಮಂಗಳೂರು ಹಾಳಾದದ್ದು ಗೊತ್ತಾಗಲಿಲ್ಲ ಎಂದು ಛೇಡಿಸಿದರು.
ಶಿರಾಡಿ, ಚಾರ್ಮಾಡಿ ಮತ್ತು ಸಂಪಾಜೆ ಘಾಟಿಗಳಲ್ಲಿ ಭೂಕುಸಿತ ದಿಂದ ಸಂಚಾರಕ್ಕೆ ಸಮಸ್ಯೆ ಆಗುತ್ತಿರುವುದನ್ನು ಸಿಎಂ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಬೆಂಗಳೂರಿನಲ್ಲಿ 15 ದಿನಗಳೊಳಗೆ ಸಭೆ ನಡೆಸಿ ಸೂಕ್ತ ಪರಿಹಾರಗಳ ಬಗ್ಗೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ ಎಂದು ನಳಿನ್ ಹೇಳಿದರು.
Click this button or press Ctrl+G to toggle between Kannada and English