ವಿಟ್ಲ : ಬೆಂಗಳೂರು ಕಡೆಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಖಾಸಗಿ ಬಸ್ ರಸ್ತೆ ಹೊಂಡಕ್ಕೆ ಸಿಕ್ಕಿಹಾಕಿಕೊಂಡ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿಯುಂಟಾದ ಘಟನೆ ಮಾಣಿ ಸಮೀಪದ ಬೊಳ್ಳುಕಲ್ಲು ಎಂಬಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ.
ಮಂಗಳೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಹೊಂಡಗಳು ನಿರ್ಮಾಣಗೊಂಡಿದ್ದು, ಬೆಳಗ್ಗೆ ಹೊಂಡದಲ್ಲಿ ಬಸ್ ಸಿಲುಕಿದೆ. ಇದರಿಂದ ಘನ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿ 2 ತಾಸುಗಳ ವರೆಗೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮಂಗಳೂರು ಸುತ್ತಮುತ್ತಲಿನ ಪ್ರಯಾಣಿಕರು ರಸ್ತೆಯಲ್ಲಿ ಕಾಲಕಳೆಯುವಂತಾಯಿತು. ಬಳಿಕ ಉಪ್ಪಿನಂಗಡಿಯಿಂದ ಕ್ರೇನ್ ತರಿಸಿ ಬಸ್ಸನ್ನು ಬದಿಗೆ ಸರಿಸಲಾಯಿತು.
Click this button or press Ctrl+G to toggle between Kannada and English