ಮಂಗಳೂರು : ಕೆನಡಾದ ಸೇಂಟ್ ಜೋನ್ಸ್ ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಅಂತಾರಾಷ್ಟ್ರೀಯ ಬೆಂಚ್ ಪ್ರೆಸ್ ಪವರ್ ಲಿಫ್ಟ್ ಚಾಂಪಿಯನ್ ಶಿಪ್ 83 ಕಿಲೋ ಸಬ್ ಜೂನಿಯರ್ ವಿಭಾಗದಲ್ಲಿ ಭಾರತ ಪ್ರತಿನಿಧಿಸಿರುವ ಋತ್ವಿಕ್ ಅಲೆವೂರಾಯ ಕೆ.ವಿ. ಎರಡು ಚಿನ್ನದ ಪದಕ ಪಡೆದಿದ್ದಾರೆ.
ಕ್ಲಾಸಿಕ್ ಮತ್ತು ಎಕ್ವಿಪ್ಡ್ ವಿಭಾಗದಲ್ಲಿ ಭಾರ ಎತ್ತಿ ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾರೆ.ಇವರು ಪ್ರದೀಪ್ ಆಚಾರ್ಯ ಅವರಿಂದ ತರಬೇತಿ ಪಡೆಯುತ್ತಿದ್ದು, ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿ. ಶಾರದಾ ವಿದ್ಯಾನಿಕೇತನ ಶಾಲೆಯ ಹಳೆ ವಿದ್ಯಾರ್ಥಿ. ಇವರು ವಾಸುದೇವ ಭಟ್ ಕುಂಜತ್ತೋಡಿ ಮತ್ತು ದೀಪಾ ದಂಪತಿ ಪುತ್ರರಾಗಿದ್ದಾರೆ.
Click this button or press Ctrl+G to toggle between Kannada and English