ಮೈಸೂರು : ಮರದ ಅಂಬಾರಿ ಬೆನ್ನ ಮೇಲೆ ಹೊತ್ತು ಸಾಗಿದ ಅರ್ಜುನ ತಾಲೀಮು

1:39 PM, Thursday, September 19th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Mysureಮೈಸೂರು : ನಾಡಹಬ್ಬ ಮೈಸೂರು ದಸರಾ ಉತ್ಸವದ ಜಂಬೂ ಸವಾರಿ ಮೆರವಣಿಗೆಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಗಜಪಡೆ ತಾಲೀಮು ನಡೆಯುತ್ತಿದ್ದು, ಗುರುವಾರ ಬೆಳಗ್ಗೆ “ಅರ್ಜುನನ ಬೆನ್ನ ಮೇಲೆ 280ಕೆಜಿ ತೂಕದ ಮರದ ಅಂಬಾರಿ ಸೇರಿದಂತೆ ಒಟ್ಟು 650ಕೆಜಿ ಭಾರ ಹೊರಿಸಿ ತಾಲೀಮು ನಡೆಸಿದರು.

ಈ ವರ್ಷ ಅಕ್ಟೋಬರ್ 8ರಂದು ವಿಜಯದಶಮಿಯಂದು ಜಂಬೂ ಸವಾರಿ ನಡೆಯಲಿದ್ದು, ಇಂದು ಮೈಸೂರಿನಲ್ಲಿ ದಸಾರ ಮೆರವಣಿಗೆ ಸಾಗುವ ಹಾದಿಯಲ್ಲಿ ಅರ್ಜುನ ಆನೆ ಮೈಮೇಲೆ ಮರಳು ತುಂಬಿಸಿದ್ದ ಚೀಲ, ಮರದ ಅಂಬಾರಿಯನ್ನು ಬೆನ್ನ ಮೇಲೆ ಹೊತ್ತು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿ ಸಾಗಿತ್ತು.

ದಸರಾ ಮೆರವಣಿಗೆ ಮಾರ್ಗದಲ್ಲಿ 650ಕೆಜಿ ತೂಕ ಹೊತ್ತು ಇತರ ಆನೆಗಳ ಜತೆ ಅರ್ಜುನ ಯಶಸ್ವಿಯಾಗಿ ತಾಲೀಮು ನಡೆಸಿರುವುದಾಗಿ ವರದಿ ತಿಳಿಸಿದೆ.

ಉಪ ಅರಣ್ಯಾಧಿಕಾರಿ ಅಲೆಗ್ಸಾಂಡರ್ ಮಾತನಾಡಿ, ಯಾವುದೇ ತೊಂದರೆ ಇಲ್ಲದೆ ಅರ್ಜುನ ಅಂಬಾರಿ ಹೊತ್ತೊಯ್ಯುವ ಕೆಲಸವನ್ನು ಪೂರ್ಣಗೊಳಿಸಿದೆ. ಇದೇ ರೀತಿ ನಾಳೆಯಿಂದ ಇತರ ಆನೆಗಳ ಮೇಲೂ ಭಾರ ಹೊರಿಸಿ ತಾಲೀಮು ನಡೆಸಲಾಗುವುದು ಎಂದು ತಿಳಿಸಿದರು.

ದಸರಾ ಗಜಪಡೆಯಲ್ಲಿದ್ದ ವರಲಕ್ಷ್ಮಿ ಎಂಬ ಹೆಣ್ಣಾನೆ ಗರ್ಭಿಣಿಯಾಗಿದ್ದು, ಇಂದು ತಾಲೀಮಿನಲ್ಲಿ ಪಾಲ್ಗೊಂಡಿಲ್ಲ. ಗಜಲಕ್ಷ್ಮಿ ಆನೆ ಆರೋಗ್ಯವಂತವಾಗಿದ್ದು, ದೈಹಿಕವಾಗಿಯೂ ಸಶಕ್ತವಾಗಿದೆ ಎಂದು ಅಲೆಕ್ಸಾಂಡರ್ ವಿವರಿಸಿದ್ದಾರೆ.

 

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English