ಬೆಂಗಳೂರು : ಪೈಲ್ವಾನ್ ಚಿತ್ರದ ಪೈರಸಿ ಕಾಪಿಯನ್ನು ಸಾಮಾಜಿಕ ಜಾಲ ಬಳಕೆದಾರರಿಗೆ ಸಿಗುವಂತೆ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಸಿಸಿಬಿ ಸೈಬರ್ ಪೊಲೀಸರು ಯಶಸ್ವಿಯಾಗಿದ್ದಾರೆ.
ರಾಕೇಶ್ ಎಲ್ ಅಲಿಯಾಸ್ ರಾಕೇಶ್ ವಿರಾಟ್ ಬಂಧಿತ ಆರೋಪಿ. ಈತ ಸಾಮಾಜಿಕ ಜಾಲತಾಣಗಳಲ್ಲಿ ಸ್ಟಾರ್ವಾರ್ ಗೆ ಕಾರಣನಾಗಿದ್ದ. ಈತ ನೆಲಮಂಗಲ ತಾಲೂಕಿನ ಇಮಚೇನಹಳ್ಳಿ ನಿವಾಸಿಯಾಗಿದ್ದು ಇತ್ತೀಚೆಗೆ ಬಿಡುಗಡೆಯಾದ ಪೈಲ್ವಾನ್ ಕನ್ನಡ ಚಲನಚಿತ್ರದ ಪೈರಸಿ ಕಾಪಿ ಇರುವ ಲಿಂಕ್ಅನ್ನು ಜಾಲತಾಣ ಬಳಕೆದಾರರಿಗೆ ಮೆಸೆಂಜರ್ ಮೂಲಕ ಕಳುಹಿಸಿದ್ದ. ಹೀಗಾಗಿ ಪೈಲ್ವಾನ್ ಚಿತ್ರದ ನಿರ್ಮಾಪಕಿ ಸ್ವಪ್ನಕೃಷ್ಣ ಚಿತ್ರ ಬಿಡುಗಡೆಯ ದಿನವೇ ಪೈರಸಿಯಾಗಿತ್ತು ಎಂದು ದೂರು ನೀಡಿದ್ದರು.
ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಡಿಸಿಪಿ ರವಿ ಕುಮಾರ್ ಇನ್ಸ್ಪೆಕ್ಟರ್ ಯಶವಂತ್ ನೇತೃತ್ವದಲ್ಲಿ ತನಿಖೆ ನಡೆಸಿದಾಗ ರಾಕೇಶ್ ವಿರಾಟ್ ಎಂಬ ಹೆಸರಿನಲ್ಲಿ ಫೇಸ್ ಬುಕ್ ಖಾತೆ ಹೊಂದಿರುವ ಆರೋಪಿ ದರ್ಶನ್ ಅಭಿಮಾನಿಯಾಗಿದ್ದು ಚಲನಚಿತ್ರ ಬಿಡುಗಡೆಯಾದ ದಿನವೇ ಚಿತ್ರದ ಸ್ಕ್ರೀನ್ ಶಾಟ್ಗಳನ್ನು ಶೇರ್ ಮಾಡಿ, ಸಿನಿಮಾ ಬೇಕೆಂದವರು ತನಗೆ ಇನ್ಬಾಕ್ಸ್ ಮಾಡುವಂತೆ ಹೇಳಿದ್ದ. ಸದ್ಯ ಆರೋಪಿಯನ್ನ ಬಂಧಿಸಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಚಿತ್ರದ ಲಿಂಕ್ ಇವನ ಬಳಿ ಹೇಗೆ ಬಂತು? ಎಷ್ಟು ಜನರಿಗೆ ಶೇರ್ ಮಾಡಿದ್ದಾನೆ ಎಂಬ ಬಗ್ಗೆ ತನಿಖೆ ಮಾಡಬೇಕಿದೆ ಹಾಗೆ ರಾಕೇಶ್ ವಿರಾಟ್ ಹಿಂದೆ ಯಾರಾದರೂ ಇದ್ದಾರಾ ಎಂಬ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
Click this button or press Ctrl+G to toggle between Kannada and English