21 ನೇ ವರ್ಷದ ಭಜನಾತರಬೇತಿ ಶಿಬಿರ ಮತ್ತು ಸ೦ಸ್ಕೃತಿ ಸ೦ವರ್ಧನಾ ಕಾರ್ಯಗಾರ

8:36 PM, Friday, September 20th, 2019
Share
1 Star2 Stars3 Stars4 Stars5 Stars
(No Ratings Yet)
Loading...

Bajana Kammata ಧರ್ಮಸ್ಥಳ : ಕನ್ನಡ ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಸುದೀರ್ಘಇತಿಹಾಸವಿದೆ. ಈ ಸಾಹಿತ್ಯ ಅನೇಕ ರೂಪಗಳಲ್ಲಿ ಅಭಿವ್ಯಕ್ತಿಯನ್ನು ಪಡೆಯಿತು. ಇವುಗಳಲ್ಲಿ ಕೀರ್ತನೆಯುಅಥವಾ ಭಜನೆಯು ಒಂದು. ಇದು ಭಕ್ತಿ ಪಂಥವು ಬಳಸಿದ ಒಂದು ಪ್ರಮುಖ ಸಂವಹನ ಮಾಧ್ಯಮವಾಯಿತು.

ಇದುಒಂದುಯುಗಧರ್ಮವನ್ನೇಅಭಿವ್ಯಕ್ತಿಸಬಲ್ಲ ಸಾಹಿತ್ಯ ಮಾಧ್ಯಮವಾಯಿತು. ಜನರಿಗೆ ನೇರವಾಗಿ ತಲುಪಲು ರಂಜನೀಯ. ಪ್ರಭಾವಿಯೂ ಆಗಿ ಕೀರ್ತನರೂಪವಾಗಿ ಅವಿಷ್ಕಾರವಾಯಿತು. ಮಾಧ್ಯಕಾಲೀನ ಭಕ್ತಿಯುಗ ಈ ಭಜನಾ ಸಂಪ್ರದಾಯಕ್ಕೆ ಹತ್ತಿರವಾದದ್ದು ಶೈವ ಹಾಗೂ ವೈಷ್ಣವ ಪಂಥಗಳೆರಡು ವ್ಯಾಪಕವಾಗಿ ಭಜನಾ ಪರಂಪರೆಯನ್ನು ಹುಟ್ಟು ಹಾಕಿದವು.ಈ ಪರಂಪರೆಯ ದಾಸರು ಭಜನೆಗಳಿಗೆ ತಾತ್ವಿಕ ರೂಪವೊಂದನ್ನುಕೊಡಲು ಸಮರ್ಥರಾದರು. ನವವಿಧ ಭಕ್ತಿಗಳ ಮೂಲಕ ಅವರು ಭಜನೆಗೆಂದು ವ್ಯಾಖ್ಯಾನವನ್ನು ನೀಡಿದರು. ಹೀಗೆ ವ್ಯಾಖ್ಯಾನೆಗೊಂಡ ಭಜನೆ ಶೈವ ಮತ್ತು ವೈಷ್ಣವ ಎನ್ನುವ ವಿಂಗಡನೆಯಗೆರೆಯನ್ನುದಾಟಿ ಭಾವೈಕ್ಯನಕಡೆಗೆ ಸಾಗಿ ಜಾತಿ ಮತಗಳನ್ನು ಮೀರಿದ ದೇಶಿಯ ಆರಾಧನಾ ಗೀತೆಗಳ ಸಂಪ್ರದಾಯವಾಯ್ತು.

Bajana Kammata ನೂತನವಾದ ಭಜನಾ ಪರಂಪರೆಯನ್ನು ಉಳಿಸಿ ಬೆಳೆಸುವ ದೃಷ್ಟಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಪದ್ಮವಿಭೂಷಣಡಾ| ವೀರೇಂದ್ರ ಹೆಗ್ಗಡೆಯವರುತಮ್ಮ ಬಾಲ್ಯದಲ್ಲಿ ಭಜನಾ ಸಂಸ್ಕೃತಿಯಲ್ಲೇ ಬೆಳೆದವರು. ಪೂಜ್ಯನೀಯ ಹೆಗ್ಗಡೆಯವರು ಸಮಾಜದಲ್ಲಿ ಶಾಂತಿ, ಸಹಬಾಳ್ವೆ, ಸಾಮರಸ್ಯಗಳನ್ನು ಮೂಡಿಸುವ ಕನಸು ಕಂಡು ಇದನ್ನು ಸಾಕಾರಗೊಳಿಸುವ ಉದ್ದೇಶಕ್ಕಾಗಿ ಆರಿಸಿಕೊಂಡ ಮಾಧ್ಯಮ ಭಜನಾ ತರಬೇತಿ ಶಿಬಿರ ಮತ್ತು ಹಾಗೂ ಸ೦ಸ್ಕೃತಿ ಸ೦ವರ್ಧನಾ ಕಾರ್ಯಗಾರದ ಈ ಭಜನಾ ತರಬೇತಿ ಶಿಬಿರಕ್ಕೆ ಚಾಲನೆ ದೊರಕಿದ್ದು1999 ನೇ ಇಸವಿಯಒಕ್ಟೋಬರ್ ತಿಂಗಳಲ್ಲಿ ಪ್ರಾರಂಭವಾಗಿ ಪ್ರಸ್ತುತ21 ನೇ ವರ್ಷಕ್ಕೆಕಮ್ಮಟವುಯಶಸ್ವಿಯಾಗಿ ನಡೆಯುತ್ತಿದೆ.

ಭಜನಾಕಮ್ಮಟದ ವೈಶಿಷ್ಠ್ಯಗಳು:-

ಭಜನಾ ಕಮ್ಮಟದಲ್ಲಿ ದಾಸ ಸಾಹಿತ್ಯ ವಚನಗಳನ್ನು, ಇತರ ಭಕ್ತಿಗೀತೆಗಳನ್ನು, ಸಂಪನ್ಮೂಲ ವ್ಯಕ್ತಿಗಳಿಂದ ಕಲಿಸಿಕೊಡುವುದು.ರಾಗ, ತಾಳ, ಲಯದೊಂದಿಗೆ ಹಾಡುಗಳ ಅಧ್ಯಯನ, ಕುಣಿತ ಭಜನೆಯನ್ನು ಹೇಳಿಕೊಡಲಾಗುತ್ತಿದೆ. ಯೋಗದೊಂದಿಗೆ ದಿನಚರಿ ಪ್ರಾರಂಭ. ನಗರ ಸಂಕೀರ್ತನೆ,

ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ದಿನಚರಿಅಂತ್ಯ. 7 ದಿನಗಳ ಕಾಲ ನಡೆಯುವ ಭಜನಾ ತರಬೇತಿ ಕಮ್ಮಟ.

ಭಜನಾ ಕಮ್ಮಟದಲ್ಲಿಇದುವರೆಗೆ2058  ಮಂಡಳಿಯ 4090 ಮಂದಿಗೆ ತರಬೇತಿ ನೀಡಲಾಗಿದೆ. ಭಜನಾ ತರಬೇತಿ ಕಮ್ಮಟದ ಕೊನೆಯ ದಿನ. ಈ ಹಿಂದೆ ಭಜನಾ ತರಬೇತಿ ಕಮ್ಮಟದಲ್ಲಿ ಭಾಗವಹಿಸಿದ ಭಜನಾರ್ಥಿಗಳೊಂದಿಗೆ ಅವಿಭಾಜಿತದ.ಕ, ಉಡುಪಿ ಜಿಲ್ಲೆ, ಕಾಸರಗೋಡು, ಉ.ಕ, ಶಿವಮೊಗ್ಗ ಜಿಲ್ಲೆಯ ಭಜನಾ ಮಂಡಳಿಗಳ ಭಜಕರು ಶೋಭಾಯಾತ್ರೆಯಲ್ಲಿ ಭಜನಾ ಸೇವೆಯನ್ನು ಶ್ರೀ ಮಂಜುನಾಥ ಸ್ವಾಮಿಗೆ ಸಮರ್ಪಿಸಿ ಪೂಜ್ಯನೀಯ ಹೆಗ್ಗಡೆಯವರುಕಮ್ಮಟದ ಶಿಬಿರಾರ್ಥಿಗಳ ಹಾಗೂ ಇತರಗಣ್ಯರ ಉಪಸ್ಥಿತಿಯಲ್ಲಿ ಕುಣಿತ ಭಜನೆ ಹಾಗೂ ಗಣ್ಯರ ಸಂದೇಶದೊಂದಿಗೆ ಸಮಾಪನಗೊಳ್ಳುತ್ತದೆ.

ಭಜನಾ ಮಂಗಲೋತ್ಸವದಲ್ಲಿಇದುವರೆಗೆ ನಾಡಿನ ಸುಮಾರು6,500 ಮಂಡಳಿಯ 95,000ಕ್ಕಿಂತಲೂಅಧಿಕ ಭಜಕರು ಭಾಗವಹಿಸಿ ಬದುಕನ್ನು ಸಾರ್ಥಕ್ಯಪಡಿಸಿಕೊಂಡಿದ್ದಾರೆ.

ಭಜನಾತರಬೇತಿಕಮ್ಮಟದಲ್ಲಿತರಬೇತಿ ಪಡಕೊಂಡ ಮಂಡಳಿಗಳು ತಮ್ಮತಮ್ಮಊರಿನಲ್ಲಿ ಭಜನೆ ಎಂಬ ಭಕ್ತಿಯ ಬೆಳಕನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.ಭಜನಾ ಮಂಡಳಿಗಳು ಊರಿನಧಾರ್ಮಿಕ ಶ್ರದ್ಧಾಕೇಂದ್ರವಾಗಿ ಮಾತ್ರವಲ್ಲದೆ ಸಾಮಾಜಿಕ ಪರಿವರ್ತನೆಯ ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಾರೆ. ಗ್ರಾಮೀಣ ಭಾಗದ ಸ್ವಚ್ಛತೆ, ಕಾನೂನು ಮಾಹಿತಿ, ಆರೋಗ್ಯ ಮಾಹಿತಿ, ಶ್ರಮದಾನ, ಯಕ್ಷಗಾನ ಸಂಗೀತ, ಭರತನಾಟ್ಯತರಬೇತಿ ಕೇಂದ್ರ, ರಕ್ತದಾನ ಶಿಬಿರ, ಮಕ್ಕಳಿಗೆ ಪುಸ್ತಕ ವಿತರಣೆ, ಪರಿಸರ ಸಂರಕ್ಷಣೆ, ಸಾಮಾಜಿಕ ಸಾಮರಸ್ಯ ಬೆಳೆಸುವ ರಾಷ್ಟ್ರೀಯ ಹಬ್ಬ, ಧಾರ್ಮಿಕ ಕಾರ್ಯಕ್ರಮಗಳ ಸಂಘಟನೆಯನ್ನು ಮಾಡುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಭಜನಾ ಮಂಡಳಿಗಳ ಕಟ್ಟಡ ನಿರ್ಮಾಣ, ಇನ್ನಿತರ ಮೂಲಸೌಕರ್ಯಗಳು ಸಾಕಷ್ಟು ಅನುದಾನಕೂಡ ನೀಡಲಾಗುತ್ತದೆ.

ಭಜನಾಕಮ್ಮಟದ ಯಶಸ್ವಿಗೆ ರೂಪುರೇಷೆ ಹಾಕಿ ಮಾರ್ಗದರ್ಶನ ನೀಡುವವರು ಪೂಜ್ಯನೀಯಡಾ| ವೀರೇಂದ್ರ ಹೆಗ್ಗಡೆಯವರು, ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರುಕಮ್ಮಟದ ಯಶಸ್ವಿ ಅನುಷ್ಠಾನಕ್ಕೆ ಸಹಕಾರ ನೀಡುವವರುಗೌರವಾನ್ವಿತ ಶ್ರೀ ಡಿ. ಹರ್ಷೇಂದ್ರಕುಮಾರ್, ಶ್ರೀಮತಿ ಸುಪ್ರಿಯ ಹರ್ಷೇಂದ್ರಕುಮಾರ್, ಹಾಗೂ ಪೂಜ್ಯನೀಯಖಾವಂದರಕುಟುಂಬಸ್ಥರುಕಮ್ಮಟದ ಯಶಸ್ವಿಗೆ ಪೂರಕವಾಗಿಯೋಜನಾ ಬದ್ಧವಾಗಿ ಕೆಲಸ ಮಾಡುವವರು. ಭಜನಾತರಬೇತಿಕಮ್ಮಟದಕಾರ್ಯಕಾರಿ ಮಂಡಳಿಯ ಸದಸ್ಯರು ಸಂಘಟನೆಗೆ ಬಲನೀಡುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯವರು, ಶ್ರೀ ಕ್ಷೇತ್ರದ ಸಿಬ್ಬಂದಿಗಳು ಹಾಗೂ ಕ್ಷೇತ್ರದ ಸ್ವಯಂಸೇವಕರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English