ಉಪ್ಪಿನಂಗಡಿ : ಟ್ಯಾಂಕರ್‌ನ ಒಳಗೆ ಚಾಲಕನ ಮೃತದೇಹ ಪತ್ತೆ  

9:59 AM, Saturday, September 21st, 2019
Share
1 Star2 Stars3 Stars4 Stars5 Stars
(5 rating, 1 votes)
Loading...

tyankarಉಪ್ಪಿನಂಗಡಿ : ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು – ಮಂಗಳೂರು ನಡುವಿನ ಕೆಂಪುಹೊಳೆ ಸಮೀಪ ಟಾರ್‌ ಅನ್ನು ಹೊತ್ತೂಯ್ಯುವ ಟ್ಯಾಂಕರ್‌ನಲ್ಲಿ ಚಾಲಕನ ಶವ ಪತ್ತೆಯಾದ ಘಟನೆ ನಡೆದಿದೆ.

ಶುಕ್ರವಾರ ಮುಂಜಾನೆ 11ರ ಸುಮಾರಿಗೆ ಮಾರನಹಳ್ಳಿ ಕೆಂಪುಹೊಳೆಯಿಂದ 10 ಕಿ.ಮೀ. ದೂರದಲ್ಲಿ ಹೊಸೂರಿನಿಂದ ಮಂಗಳೂರಿಗೆ ಬರುತ್ತಿದ್ದ ಟ್ಯಾಂಕರ್‌ ನಿಂತಿರುವುದನ್ನು ಗಮನಿಸಿದ ಅದೇ ಕಂಪೆನಿಯ ಇನ್ನೋರ್ವ ಚಾಲಕ ಟ್ಯಾಂಕರ್‌ ಬಳಿ ಚಾಲಕನನ್ನು ಮಾತನಾಡಿಸುವ ಇರಾದೆಯಲ್ಲಿ ತೆರಳಿದಾಗ ಟ್ಯಾಂಕರ್‌ನಲ್ಲಿ ಚಾಲಕ ಕಂಡಿರಲಿಲ್ಲ. ಟ್ಯಾಂಕರ್‌ ಸುತ್ತ ಹುಡುಕಾಡಿದಾಗ ಟ್ಯಾಂಕರ್‌ನ ಮೇಲ್ಭಾಗದ ಮುಚ್ಚಳ ತೆಗೆದುಕೊಂಡಿದ್ದು ಕಂಡಿತು. ಒಳಗಡೆ ಗಮನಿಸಿದಾಗ ಆತನ ಶವ ಪತ್ತೆಯಾಗಿರುವುದು ಕಂಡಿತು. ತತ್‌ಕ್ಷಣವೇ ಆತ ಸಕಲೇಶಪುರ ಠಾಣೆಗೆ ಮಾಹಿತಿ ನೀಡಿದ್ದಾರೆ.

ಠಾಣೆ ಎಸ್‌ಐ ಹಾಗೂ ವೃತ್ತ ನಿರೀಕ್ಷಕರು ಸ್ಥಳಕ್ಕೆ ತೆರಳಿ, ಪರಿಶೀಲಿಸಿದಾಗ ಮೃತದೇಹದಲ್ಲಿ ಯಾವುದೇ ಗಾಯಗಳು ಕಂಡುಬಂದಿಲ್ಲ. ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾಗಿರುವುದಾಗಿ ಪ್ರಕರಣ ದಾಖಲಿಸಿದ್ದಾರೆ.

ಮೃತನನ್ನು ತಮಿಳುನಾಡು ರಾಜ್ಯದ ತಿರುಚ್ಚಿಯ ನಟರಾಜ್‌ ಎಂಬವರ ಪುತ್ರ ನಾಗರಾಜ್‌ (37) ಎಂದು ಗುರುತಿಸಲಾಗಿದೆ. ಇನ್ನೊಂದು ಟ್ಯಾಂಕರ್‌ನ ಚಾಲಕ ತ್ಯಾಗರಾಜ್‌ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.

 

Kalikamba-Ad

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English