ವಿಡಿಯೋ ವೈರಲ್ : ಟೆಂಪೋ ಚಾಲಕನ ಮೇಲೆ ಟ್ರಾಫಿಕ್ ಪೊಲೀಸ್ ಹಲ್ಲೆ

2:08 PM, Saturday, September 21st, 2019
Share
1 Star2 Stars3 Stars4 Stars5 Stars
(5 rating, 1 votes)
Loading...

trafic-policeಬೆಂಗಳೂರು : ಟೆಂಪೊ ಚಾಲಕನೊಬ್ಬನ ಮೇಲೆ ಹಲ್ಲೆ ಮಾಡಿದ ಬೆಂಗಳೂರು ಟ್ರಾಫಿಕ್ ಕಾನ್ಸ್‌ಟೇಬಲ್ ಒಬ್ಬರ ವಿಡಿಯೋ ವೈರಲ್ ಆಗಿದೆ.

ಇಂದು ಬೆಳಗ್ಗೆ ಟೌನ್ ಹಾಲ್ ಬಳಿ ಘಟನೆಯು ನಡೆದಿದ್ದು, ಬಿಬಿಎಂಪಿ ಕಡೆಯಿಂದ ಟೌನ್ ಹಾಲ್ ಬಳಿ ಯೂ ಟರ್ನ ತೆಗೆದುಕೊಂಡ ಎಂಬ ಕಾರಣಕ್ಕೆ ಟೆಂಪೊ ಟ್ರಾವೆಲರ್ ಚಾಲಕ ಸುನಿಲ್ ಎಂಬ ಯುವಕನಿಗೆ ಟ್ರಾಫಿಕ್ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರು ಥಳಿಸಿದ್ದಾರೆ. ಅಷ್ಟೆ ಅಲ್ಲದೆ ಅತ್ಯಂತ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದ್ದಾರೆ.

ಘಟನೆಯ ಪೂರ್ಣ ದೃಶ್ಯಗಳನ್ನು ಚಾಲಕ ಸುನಿಲ್ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡಿದ್ದು, ವಿಡಿಯೋ ಭಾರಿ ವೈರಲ್ ಆಗಿದೆ. ಟ್ರಾಫಿಕ್ ಪೊಲೀಸ್ ತೋರಿದ ದೌರ್ಜನ್ಯಕ್ಕೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ಯೂ ಟರ್ನ್ ತೆಗೆದುಕೊಂಡನೆಂಬ ಕಾರಣಕ್ಕೆ ಟೆಂಪೋ ಏರಿ ಚಾಲಕನ ಪಕ್ಕ ಕೂತ ಪೊಲೀಸ್ ಪೇದೆ, ಮೊದಲಿಗೆ ಗಾಡಿಯನ್ನು ರಸ್ತೆಯ ಬದಿಗೆ ನಿಲ್ಲಿಸುವಂತೆ ಹೇಳಿದ್ದಾರೆ. ಚಾಲಕ ಸುನಿಲ್‌, ‘ಇಲ್ಲಿ ವಾಹನಗಳಿವೆ ಮುಂದೆ ನಿಲ್ಲಿಸುತ್ತೇನೆ’ ಎಂದಿದ್ದಾರೆ. ಆಗ ತಾನೇ ವಾಹನದ ಸ್ಟೀರಿಂಗ್ ವ್ಹೀಲ್ ಹಿಡಿದು ಪಕ್ಕಕ್ಕೆ ಎಳೆಯುವ ಪ್ರಯತ್ನ ಮಾಡಿದ್ದಾರೆ ಪೊಲೀಸ್ ಪೇದೆ.

ಟ್ರಾಫಿಕ್ ಪೊಲೀಸ್ ಪೇದೆಯು ಅಲ್ಸೂರು ಗೇಟ್ ಸಂಚಾರಿ ಪೊಲೀಸ್ ಠಾಣೆಯವರು ಎನ್ನಲಾಗಿದ್ದು, ಮಾಹಿತಿಗಾಗಿ ಠಾಣೆಗೆ ಕರೆ ಮಾಡಿದರೆ ಠಾಣೆಯ ಲ್ಯಾಂಡ್ ಲೈನ್ ದುರಸ್ಥಿ ಆಗಿತ್ತು, ಎಸ್‌ಐ ಸಹ ಕರೆಯನ್ನು ಸ್ವೀಕರಿಸಲಿಲ್ಲ.

ಇತ್ತೀಚಿನ ದಿನಗಳಲ್ಲಿ ಪೊಲೀಸರ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗುತ್ತಲಿವೆ. ಜೊತೆಗೆ ಸಾರ್ವಜನಿಕರು ಪೊಲೀಸರ ಮೇಲೆ ಹಲ್ಲೆ ನಡೆಸುತ್ತಿರುವ ಪ್ರಕರಣಗಳೂ ಹೆಚ್ಚಾಗಿವೆ. ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿಯಾಗಿ ದಂಡದ ಪ್ರಮಾಣ ಹೆಚ್ಚಾದ ನಂತರ ಈ ರೀತಿಯ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಾಕತಾಳೀಯವಲ್ಲ, ದಂಡ ಹೆಚ್ಚಳವು ಮೊದಲೇ ಇದ್ದ ಪೊಲೀಸ್-ಸಾರ್ವಜನಿಕರ ನಡುವೆ ಇದ್ದ ತಿಕ್ಕಾಟವನ್ನು ಹೆಚ್ಚು ಮಾಡಿದೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English