ಮಂಗಳೂರು: ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಗ್ಯಾಸ್ ಸಿಲಿಂಡರ್ ಮಿತಿಯನ್ನು ರದ್ದು ಗೊಳಿಸಲು ದ. ಕ. ಜಿಲ್ಲಾಧಿಕಾರಿ ಕಛೇರಿ ಮುಂಬಾಗದಲ್ಲಿ ಬೃಹತ್ ಪ್ರತಿಭಟನಾ ಸಭೆ ಇಂದು ಬೆಳಿಗ್ಗೆ ನಡೆಯಿತು.
ಬಿಜೆಪಿ ಮಹಿಳಾ ಮೋರ್ಚಾದ ಸದಸ್ಯರು ನಗರದ ಜ್ಯೋತಿ ವೃತ್ತದಿಂದ ಕಾಲ್ನಡಿಗೆಯಲ್ಲಿ ಜಾಥಾ ಹೊರಟು ಜಿಲ್ಲಾಧಿಕಾರಿ ಮುಖ್ಯ ದ್ವಾರದ ಬಳಿ ಜಮಾಹಿಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮಹಿಳಾ ಮೋರ್ಚಾ ಅದ್ಯಕ್ಷೆ ಪುಲಸ್ಯ ರೈ ಮಾತನಾಡಿ 2004 ರಲ್ಲಿ ಈ ದೇಶದಲ್ಲಿ ಅಧಿಕಾರಕ್ಕೆ ಬಂದ ಕೇಂದ್ರದ ಯುಪಿಎ ಸರಕಾರವು ಒಂದಲ್ಲ ಒಂದು ಹಗರಣದಲ್ಲಿ ಸಿಲುಕಿಕೊಂಡಿದ್ದು ಸಂಪೂರ್ಣ ಆಡಳಿತ ವ್ಯವಸ್ಥೆಯು ಶಿಥಿಲಾವಸ್ತೆಯನ್ನು ತಲುಪಿರುತ್ತದೆ. ಆಡಳಿತದ ಮೇಲಿನ ನಿಯಂತ್ರಣವನ್ನು ಕಳೆದುಕೊಡಿರುವ ಈ ಸರಕಾರವು ಜನಸಾಮಾನ್ಯರಿಗೆ ತೀವ್ರ ರೀತಿಯಲ್ಲಿ ಅನೇಕ ತರದ ಸಮಸ್ಯೆಗಳನ್ನು ತಂದೊಡ್ಡಿದೆ. ಬೇಳೆಕಾಳು, ನಿತ್ಯೋಪಯೋಗಿ ದಿನಸಿಗಳ ಮಾರುಕಟ್ಟೆಯ ವ್ಯವಸ್ಥೆಯನ್ನು ಕಾಳಸಂತೆಕೋರರು ನಿಯಂತ್ರಿಸುತ್ತಿದ್ದು, ಬಡ ಹಾಗೂ ಮಧ್ಯಮವರ್ಗದ ಜನ ಜೀವಿಸಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ ಸರಕಾರದ ವೈಫಲ್ಯವೆ ಇದಕ್ಕೆಲ್ಲಾ ಕಾರಣ ಎಂಬುದು ಸರ್ವವಿದಿತವಾಗಿದೆ. ಇಷ್ಟು ಮಾತ್ರವಲ್ಲದೇ ಇದೀಗ ಜನಸಾಮಾನ್ಯರು ಬಳಸುವಂತಹ ಗೃಹ ಬಳಕೆಯ ಅಡುಗೆ ಅನಿಲದ ಜಾಡಿಗಳ ಮೇಲೆ ನಿರ್ಬಂಧವನ್ನು ಹಾಕುವುದರ ಮೂಲಕ ಗಾಯದ ಮೇಲೆ ಬರೆ ಎಳೆದಿದೆ ಎಂದರು.
ಇಂತಹ ಪರಿಸ್ಥಿಯಲ್ಲಿ ಜನಸಾಮಾನ್ಯರ ನೋವನ್ನು ಅರಿಯಲು ವಿಫಲವಾಗಿರುವ ಸದ್ರಿ ಕೇಂದ್ರ ಸರಕಾರದ ಮೇಲೆ ತಾವು ತಮ್ಮ ಸಂವಿಧಾನದತ್ತ ಅಧಿಕಾರವನ್ನು ಚಲಾಯಿಸಿ ಅವೈಜ್ಞಾನಿಕ ಹಾಗೂ ಕೃತಕ ಅಭಾವವನ್ನು ನಿರ್ಮಿಸಿ , ಏರಿಸಿರುವ ನಿತ್ಯೋಪಯೋಗಿ ಸಾಮಾಗ್ರಿಗಳ ಮೇಲಿನ ಬೆಲೆಯನ್ನು ನಿಯಂತ್ರಣಕ್ಕೆ ತರುವಲ್ಲಿ ಹಾಗೂ ಹಿಂದಿನಂತೆಯೇ ಸರಬರಾಜು ಆಗುತ್ತಿದ್ದ ಅಡುಗೆ ಅನಿಲದ ಪೂರೈಕೆ ವ್ಯವಸ್ಥೆಯನ್ನು ಮುಂದುವರಿಸುವಂತೆ ಸೂಕ್ತ ನಿರ್ದೇಶನವನ್ನು ನೀಡುವುದರ ಮೂಲಕ ಈ ದೇಶದ ಜನಸಾಮಾನ್ಯರನ್ನು ರಕ್ಷಿಸಬೇಕಾಗಿ ರಾಷ್ಟ್ರಪತಿಯವರನ್ನು ಕೇಳಿಕೊಂಡರು.
Click this button or press Ctrl+G to toggle between Kannada and English