ಮಗುವಿಗೆ ಲೈಂಗಿಕ ಹಲ್ಲೆ : ವೃದ್ಧನ ಆರೋಪ ಸಾಬೀತು

11:08 AM, Wednesday, September 25th, 2019
Share
1 Star2 Stars3 Stars4 Stars5 Stars
(No Ratings Yet)
Loading...

basavaಉಡುಪಿ : ನಾಲ್ಕು ವರ್ಷದ ಮಗುವಿನ ಮೇಲೆ ಘೋರ ಲೈಂಗಿಕ ಹಲ್ಲೆ ನಡೆಸಿದ 70 ವರ್ಷದ ವೃದ್ದನ ಆರೋಪ ಸಾಬೀತಾಗಿದೆ ಎಂದು ಉಡುಪಿ ಪೋಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಆದೇಶ ನೀಡಿದ್ದಾರೆ.

ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಧೀಶ ಸಿ,ಎಂ ಜೋಶಿ ಅವರು ಸೆ. 25 ಕ್ಕೆ ಶಿಕ್ಷೆ ಪ್ರಮಾಣ ಕಾಯ್ದಿರಿಸಿ ಸೋಮವಾರ ತೀರ್ಪು ನೀಡಿದ್ದಾರೆ.

2018ರ ಫೆಬ್ರವರಿಯಲ್ಲಿ ಹೆಬ್ರಿ ಠಾಣಾ ವ್ಯಾಪ್ತಿಯ ನಾಲ್ಕು ವರ್ಷದ, ಅಂಗನವಾಡಿಗೆ ಹೋಗುವ ಮಗುವನ್ನು ಅದೇ ಊರಿನ ಬಸವ(70) ಎಂಬಾತ ಕರೆದೊಯ್ದು ಘೋರ ಲೈಂಗಿಕ ಅಪರಾಧ ಎಸಗಿದ್ದ. ಅಂದು ಸಾಯಾಂಕಾಲ ಮಗು ಅಸ್ವಸ್ಥಗೊಂಡ ಹಿನ್ನಲೆಯಲ್ಲಿ ವಿಚಾರಿಸಿದಾಗ ಘಟನೆಯ ಬಗ್ಗೆ ಮಗು ವಿವರಿಸಿತ್ತು. ಆ ಬಳಿಕ ಈ ಕುರಿತಾಗಿ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಫೆ. 8 ರಂದು ಆರೋಪಿ ಬಸಪ್ಪನನ್ನು ಪೊಲೀಸರು ಬಂಧಿಸಿದ್ದರು.

ಈತನಿಗೆ ಈ ಹಿಂದೆ ಜಾಮೀನು ಸಿಕ್ಕಿತ್ತಾದರೂ ಮನೆಯವರು ಜಾಮೀನಿಗೆ ಭದ್ರತೆ ನೀಡಲು ನಿರಾಕರಿಸಿದ್ದರು.‌ ಹಾಗಾಗಿ ನ್ಯಾಯಾಂಗ ಬಂಧನದಲ್ಲೇ ಇದ್ದ. ಪೊಕ್ಸೋ ಕಾಯಿದೆಯಡಿ 70 ವರ್ಷದ ವ್ಯಕ್ತಿ ವಿರುದ್ಧ ಆರೋಪ ಸಾಬೀತಾಗಿರುವುದು ಉಡುಪಿಯಲ್ಲಿ ಇದೇ ಮೊದಲು ಎಂದಿದ್ದಾರೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English