ಮಂಗಳೂರು : ಇದೊಂದು ಕುಗ್ರಾಮ ಇಲ್ಲಿ ಜನರಿಗೆ ವಾಹನ ಸಂಚಾರಕ್ಕೆ ರಸ್ತೆಗಳೇ ಇಲ್ಲ, ಮನೆಯಲ್ಲಿ ಪವರ್ ಇಲ್ಲ, ಇದು ಮೂಲಭೂತ ಸೌಲಭ್ಯಗಳಿಂದ ವಂಚಿತವಾದ ನತದೃಷ್ಟ ಗ್ರಾಮ.
ಸಂಸದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ರವರ ಆದರ್ಶ ಗ್ರಾಮ ಯೋಜನೆಯ ಗ್ರಾಮದಲ್ಲಿಈ ಪರಿಸ್ಥಿತಿ ಇದೆ. ಸುಮಾರು ಒಂದು ಕಿ.ಮೀ ತನಕ ಮರದ ಖುರ್ಚಿಯಲ್ಲಿ ರೋಗಿಯೊಬ್ಬರನ್ನು ಸಾಗಿಸಿದ ಮನಕಲಕುವ ಘಟನೆ ಇಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಳ್ಪ ಗ್ರಾಮವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಸಂಸದರ ಆದರ್ಶ ಗ್ರಾಮವನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇದೇ ಗ್ರಾಮದ ಪಡ್ಕಿಲಾಯ ಎಂಬ ಊರಿನಲ್ಲಿ ರಾಮಣ್ಣ ಪೂಜಾರಿ ಎಂಬ ವೃದ್ಧರೊಬ್ಬರ ಆರೋಗ್ಯ ಹದಗೆಟ್ಟ ಕಾರಣ ವೈದ್ಯಕೀಯ ಚಿಕಿತ್ಸೆಗಾಗಿ ಸುಮಾರು 1 ಕಿ.ಮೀನಷ್ಟು ದೂರ ಮರದ ಕುರ್ಚಿಯಲ್ಲಿ ಕಾಲ್ನಡಿಗೆ ಮೂಲಕ ಸಾಗಿಸಿದ್ದಾರೆ. ಆ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ಇದೀಗ ಸಾಕಷ್ಟು ವೈರಲ್ ಆಗಿದೆ.
ಈ ಊರಿನಲ್ಲಿ ಸರಿಯಾದ ರಸ್ತೆ ಸಂಪರ್ಕವಿಲ್ಲ, ವಾಹನದ ಸೌಲಭ್ಯಗಳೂ ಇಲ್ಲ. ಪರಿಣಾಮ, ಊರ ರೋಗಿಯೊಬ್ಬರನ್ನು ಮರದ ಕುರ್ಚಿಯಲ್ಲಿ ಎತ್ತಿಕೊಂಡು ಆಸ್ಪತ್ರೆಗೆ ಸಾಗಿಸಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಈ ಆದರ್ಶ ಗ್ರಾಮದಲ್ಲೇ ಈ ತರಹ ಪರಿಸ್ಥಿತಿ ಇದ್ದರೆ, ಬೇರೆ ಗ್ರಾಮಗಳನ್ನು ಕೇಳುವವರು ಯಾರು ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ.
Click this button or press Ctrl+G to toggle between Kannada and English