ಸಿದ್ದರಾಮಯ್ಯ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ ಡಾ. ಜಿ ಪರಮೇಶ್ವರ್

4:49 PM, Friday, September 27th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

G.-Parameshwarತುಮಕೂರು : ಸಿದ್ದರಾಮಯ್ಯ ಅವರಿಗಾಗಿ ಪಕ್ಷವಿಲ್ಲ, ಪಕ್ಷಕ್ಕಾಗಿ ನಾವಿದ್ದೇವೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ನಡುವಿದ್ದ ಭಿನ್ನಾಭಿಪ್ರಾಯ ಈಗ ಹೊರಬೀಳುತ್ತಿದೆ. ಸಿದ್ದರಾಮಯ್ಯರಗೋಸ್ಕರ ನಾವೇನಿಲ್ಲ, ಸಿದ್ದರಾಮಯ್ಯರಗೋಸ್ಕರ ಕಾಂಗ್ರೆಸ್ ಪಕ್ಷವೂ ಇಲ್ಲ ಅಥವಾ ನನಗೋಸ್ಕರ ಕಾಂಗ್ರೆಸ್ ಪಕ್ಷ ಇಲ್ಲ, ಕಾಂಗ್ರೆಸ್ ಪಕ್ಷಕ್ಕಾಗಿ ನಾವಿದ್ದೇವೆ ಎಂದರು.

ಉಪಚುನಾವಣೆ ಸಂಬಂಧ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಗೆ ಪರಮೇಶ್ವರ್ ಯಾಕೆ ಗೈರಾಗಿದ್ದರು ಎನ್ನುವುದಕ್ಕೆ ಸ್ಪಷ್ಟನೆ ನೀಡಿರುವ ಅವರುಸಭೆಯನ್ನು ಮೊದಲು 11:30ಕ್ಕೆ ನಿಗದಿ ಮಾಡಲಾಗಿತ್ತು. ಆದರೆ ಪಕ್ಷದ ಕಾರ್ಯಾಧ್ಯಕ್ಷರು ತುರ್ತಾಗಿ ಹೋಗ ಬೇಕಿದ್ದ ಕಾರಣ ಸಭೆಯನ್ನು ಬೆಳಗ್ಗೆ 9:30ಕ್ಕೆ ಆರಂಭ ಮಾಡಿದ್ದರು.

ನಾನು ಚಿಕ್ಕಮಗಳೂರಿನಲ್ಲಿ ಇದ್ದ ಕಾರಣ ಸಭೆಗೆ ಆಗಮಿಸಲು ತಡವಾಗುತ್ತದೆ ಎಂದು ಮೊದಲೇ ಹೇಳಿದ್ದೆ ಎಂದರು. ಸಭೆಯಲ್ಲಿ ಕೆಲ ವೈಯಕ್ತಿಕ ಪ್ರತಿಷ್ಠೆಗಾಗಿ ಮಾತಿಗೆ ಮಾತು ನಡೆದಿರಬಹುದು ಅಷ್ಟೇ. ನಾನೂ 8 ವರ್ಷ ಕೆಪಿಸಿಸಿ ಅಧ್ಯಕ್ಷನಾಗಿ ನೂರಾರು ಸಭೆ ಮಾಡಿದ್ದೇನೆ. ಸಿದ್ದರಾಮಯ್ಯ, ಹರಿಪ್ರಸಾದ್, ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ ಎಲ್ಲರೂ ಸಭೆಯಲ್ಲಿದ್ದರು.

ನಮ್ಮಲ್ಲಿ ವಲಸೆ ಅಥವಾ ಮೂಲ ಕಾಂಗ್ರೆಸ್ ಎಂಬ ಭಾಗ ಇಲ್ಲ, ಪಕ್ಷದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳಿದೆ. ಸಿದ್ದರಾಮಯ್ಯ ಅವರು ಈಗಲೂ ನಮ್ಮ ನಾಯಕರೇ. ಯಾವ ಹಿರಿಯ ನಾಯಕರೂ ಆ ರೀತಿ ನಡೆದುಕೊಂಡಿಲ್ಲ. ಮುನಿಯಪ್ಪರ ಚುನಾವಣಾ ಸೋಲಿಗೆ ಕಾರಣ ಗೊತ್ತಿಲ್ಲ. ಒಂದೊಮ್ಮೆ ಅವರು ಸಭೆಯಲ್ಲಿ ಕೆಪಿಸಿಸಿಗೆ ದೂರು ನೀಡಿದರೆ ಪಕ್ಷದ ಅಧ್ಯಕ್ಷರು ವರದಿ ಮಾಡಿ ಕ್ರಮಕೈಗೊಳ್ಳುತ್ತಾರೆ ಎಂದು ತಿಳಿಸಿದರು.

 

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English