ಹೆಲ್ಮೆಟ್ ಧರಿಸದೇ ಬಂದ ಬೈಕ್​ ಸವಾರ ಪೊಲೀಸರನ್ನು ಕಂಡು ಪರಾರಿ

5:17 PM, Friday, September 27th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

kadabaಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಚಿತ್ರ ಪ್ರಕರಣವೊಂದು ಜರುಗಿದೆ. ಹೆಲ್ಮೆಟ್ ಧರಿಸದೇ ಬಂದ ಬೈಕ್ ಸವಾರನೋರ್ವ ತನ್ನೊಂದಿಗೆ ಬಂದಿದ್ದವನನ್ನು ಇಕ್ಕಟ್ಟಿಗೆ ಸಿಲುಕಿಸಿ ಪರಾರಿಯಾಗಿರುವ ಈ ಘಟನೆ ಕಡಬದಲ್ಲಿ ನಡೆದಿದೆ.

ಹೆಲ್ಮೆಟ್ ಧರಿಸದ ಬೈಕ್ ಸವಾರನು ಪೊಲೀಸರನ್ನು ಕಂಡೊಡನೆ ಹಿಂಬದಿ ಸವಾರನನ್ನು ಕೆಳಗಿಳಿಸಿ ಬಂದ ದಾರಿಯಲ್ಲೇ ಹಿಂತಿರುಗಿ ಹೋಗಿದ್ದಾನೆ. ಆಗ ನಡೆದುಕೊಂಡು ಹೋಗುತ್ತಿದ್ದ ಹಿಂಬದಿ ಸವಾರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆತನಿಗೆ ಪೊಲೀಸರು 500 ರೂ. ದಂಡ ವಿಧಿಸಿದ್ದಾರೆ.

ಕಡಬಕ್ಕೆ ಗುರುವಾರ ಗೃಹಪ್ರವೇಶಕ್ಕೆಂದು ಕಾಸರಗೋಡಿನಿಂದ ಆಗಮಿಸಿದ್ದ ಯುವಕನನ್ನು ಬಸ್ ನಿಲ್ದಾಣದವರೆಗೆ ಬಿಡಲೆಂದು ಯುವಕನೋರ್ವ ಹೆಲ್ಮೆಟ್ ಧರಿಸದೆ ತೆರಳುತ್ತಿದ್ದ. ಕಡಬದ ಕಾಲೇಜ್ ಕ್ರಾಸ್ ಬಳಿ ಹೆದ್ದಾರಿ ಪೆಟ್ರೋಲಿಂಗ್ ವಾಹನ ನಿಂತಿರುವುದನ್ನು ಗಮನಿಸಿದ ಬೈಕ್ ಸವಾರ, ಹಿಂಬದಿ ಸವಾರನನ್ನು ಅಲ್ಲೇ ಇಳಿಸಿ ತೆರಳಿದ್ದಾನೆ. ಇದನ್ನು ಗಮನಿಸಿದ ಪೊಲೀಸ್ ಸಿಬ್ಬಂದಿ ಬೈಕಿನಿಂದ ಇಳಿದ ಯುವಕನನ್ನು ಕರೆದು, ಹೆಲ್ಮೆಟ್ ಧರಿಸಿಲ್ಲ ಎಂದು ಆರೋಪಿಸಿ 500 ರೂ. ದಂಡ ವಿಧಿಸಿ ರಶೀದಿ ನೀಡಿದ್ದಾರೆ. ಇದನ್ನು ಗಮನಿಸಿದ ಕಡಬ ಗ್ರಾ.ಪಂ. ಸದಸ್ಯರಾದ ಅಶ್ರಫ್ ಶೇಡಿಗುಂಡಿ, ಕೆ.ಎಂ. ಹಾಜಿ ಹನೀಫ್, ಎ.ಎಸ್. ಶರೀಫ್ ಮೊದಲಾದವರು ಪೊಲೀಸರ ಬಳಿ ಈ ಬಗ್ಗೆ ಪ್ರಶ್ನಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಶ್ರಫ್ ಶೇಡಿಗುಂಡಿ, ಬೈಕಿನಲ್ಲಿ ಹಿಂಬದಿ ಸವಾರನಾಗಿ ಆಗಮಿಸಿದ್ದ ವ್ಯಕ್ತಿಯು ಬೈಕಿನಿಂದ ಇಳಿದು ತೆರಳುತ್ತಿದ್ದ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪೊಲೀಸರು 500 ರೂ. ದಂಡ ವಿಧಿಸಿರುವುದು ಸರಿಯಲ್ಲ. ಪೊಲೀಸರು ಹಗಲು ದರೋಡೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಹೈವೇ ಪೆಟ್ರೋಲಿಂಗ್ ವಾಹನದಲ್ಲಿ ಕರ್ತವ್ಯದಲ್ಲಿದ್ದ ಎಎಸ್ಐ ಯೋಗೆಂದ್ರ ಪ್ರತಿಕ್ರಿಯಿಸಿ, ನಾವು ಕಡಬದಲ್ಲಿ ತಪಾಸಣೆ ನಡೆಸುತ್ತಿದ್ದೆವು. ಈ ವೇಳೆ ಬೈಕ್ ಸವಾರ ನಮ್ಮನ್ನು ಕಂಡೊಡನೆ ಹಿಂಬದಿ ಸವಾರನನ್ನ ಕೆಳಗಿಳಿಸಿ ಹಿಂತಿರುಗಿ ಹೋದ. ಆಗ ಹಿಂಬದಿ ಸವಾರನನ್ನು ಕರೆದು ಕಾನೂನು ಪ್ರಕಾರ ದಂಡ ವಿಧಿಸಿಸಿದ್ದೇವೆ. ಯಾವುದೇ ಆತನನ್ನು ನಾವು ನಿಂದಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English