ಮಂಗಳೂರು ದಸರಾ ಉತ್ಸವಕ್ಕೆ ಚಾಲನೆ ನೀಡಿದ ಡಾ| ಪಿ.ಎಸ್‌.ಹರ್ಷ

9:57 AM, Monday, September 30th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

kudroliPS-Harshakudroliಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸಂಭ್ರಮದ “ಮಂಗಳೂರು ದಸರಾ’ಕ್ಕೆ ಚಾಲನೆ ದೊರೆಯಿತು. ಇದಕ್ಕೆ ಮುನ್ನುಡಿಯಾಗಿ ಭಾನುವಾರ ಬೆಳಗ್ಗೆ ದೇವಸ್ಥಾನದ ಗೋಕರ್ಣನಾಥ ಕಲ್ಯಾಣ ಮಂಟ ಪದ ದರ್ಬಾರು ಮಂಟಪದಲ್ಲಿ ಶಾರದಾ ಮಾತೆ, ಮಹಾಗಣಪತಿ ಸಹಿತ ನವದುರ್ಗೆಯರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು. ಮಂಗಳೂರು ಪೊಲೀಸ್‌ ಆಯುಕ್ತ ಡಾ| ಪಿ.ಎಸ್‌.ಹರ್ಷ ಅವರು ಉತ್ಸವಕ್ಕೆ ಚಾಲನೆ ನೀಡಿದರು.

ಶಾರದಾ ಮಾತೆಯೊಂದಿಗೆ ನವದುರ್ಗೆಯರ ಆರಾಧನೆ ಇಲ್ಲಿನ ವೈಶಿಷ್ಟ. ಶಾರದಾ ಮಾತೆ, ಆದಿಶಕ್ತಿಯೊಂದಿಗೆ ನವರಾತ್ರಿಯ 9 ದಿನಗಳಲ್ಲಿ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಿನಿ, ಸ್ಕಂದಮಾತಾ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿಧಾತ್ರಿ ದೇವಿಯ ರನ್ನು ವಿಗ್ರಹ ರೂಪದಲ್ಲಿ ಆರಾಧಿಸಲಾಗುತ್ತದೆ. ಜತೆಗೆ, ಮಹಾಗಣಪತಿಯನ್ನು ಪ್ರತಿಷ್ಠಾಪಿಸಲಾಗಿದೆ.

ಇದಕ್ಕೂ ಮೊದಲು, ಶಾರದಾ ಮಾತೆಯ ವಿಗ್ರಹದ ಕ್ಷೇತ್ರ ಪ್ರದಕ್ಷಿಣೆ ನಡೆಯಿತು. ಬ್ಯಾಂಡ್‌, ಕೊಂಬು ವಾದ್ಯ, ಚೆಂಡೆ ತಂಡ, ಶಾರದಾ ಹುಲಿವೇಷ ತಂಡಗಳ ವಾದನ-ನರ್ತನದ ಮೂಲಕ ಮೆರುಗು ನೀಡಿದವು. ಬಳಿಕ, ಶಾರದಾ ಮೂರ್ತಿಯನ್ನು ದರ್ಬಾರು ಮಂಟಪಕ್ಕೆ ಕೊಂಡೊಯ್ದು 11.20ರ ಸುಮಾರಿಗೆ ಪ್ರತಿಷ್ಠಾಪನೆ ನೆರವೇರಿಸಲಾಯಿತು. ಬಳಿಕ, ಪುಷ್ಪಾಲಂಕಾರ ನಡೆದು ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಿತು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English